Advertisement
ಮಾ.28ರಂದು ಮುಜಾಮೀಲ್ ಷರೀಫ್ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿ, ಸೆಷನ್ಸ್ ಕೋರ್ಟ್ ಆವರಣದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಶಂಕಿತ ವ್ಯಕ್ತಿ, ಪ್ರಮುಖ ಬಾಂಬರ್ ಮುಸಾವೀರ್ ಹುಸೇನ್ ಶಬೀಬ್ ಹಾಗೂ ಸೂತ್ರದಾರ ಅಬ್ದುಲ್ ಮತೀನ್ ತಾಹಾನ ಸೂಚನೆ ಮೇರೆಗೆ ಸ್ಫೋಟಕ್ಕೆ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ. ಹೀಗಾಗಿ ಆತನನ್ನು 10 ದಿನಗಳ ಕಾಲ ವಶಕ್ಕೆ ಪಡೆಯಬೇಕು ಎಂದು ಕೋರಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ 7 ದಿನ ವಶಕ್ಕೆ ನೀಡಿತ್ತು. ಬುಧವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಶಂಕಿತ ನನ್ನು ವಿಚಾರಣಾ ಸ್ಥಳ ದಿಂದಲೇ ವಿಡಿಯೋ ಕಾನ್ಫ ರೆನ್ಸ್ ಮೂಲಕ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದ ಕೋರ್ಟ್ ಆತನಿಗೆ 30 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ.
Advertisement
Bengaluru ಸ್ಫೋಟದ ಶಂಕಿತನಿಗೆ 30 ದಿನ ನ್ಯಾಯಾಂಗ ಬಂಧನ
08:50 AM Apr 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.