Advertisement

30 ಕೈ ಶಾಸಕರು ರಾಜೀನಾಮೆ ಕೊಡುತ್ತಾರೆ, ಬಿಜೆಪಿ ಸರ್ಕಾರ ರಚಿಸುತ್ತೆ!

03:30 PM Sep 17, 2018 | Team Udayavani |

ಬೆಳಗಾವಿ:ಭಾರತೀಯ ಜನತಾ ಪಕ್ಷ ಆಪರೇಶನ್ ಕಮಲ ಮಾಡುತ್ತಿಲ್ಲ. ಪಕ್ಷದ ಒಳಜಗಳದಿಂದ 22 ಮಂದಿ ಅಲ್ಲ 30 ಶಾಸಕರು ಮೈತ್ರಿ ಸರ್ಕಾರವನ್ನು ಬೀಳಿಸಲಿದ್ದಾರೆ ಎಂಬ ಮಾಹಿತಿ ಇದೆ ಎಂಬುದಾಗಿ ಹುಕ್ಕೇರಿ ಶಾಸಕ, ಮಾಜಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

Advertisement

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಆಪರೇಶನ್ ಕಮಲದ ಜವಾಬ್ದಾರಿ ಕೊಟ್ಟರೂ ಓಕೆ ಎಂದರು. ಆದರೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಒಳಜಗಳವೇ ಹೆಚ್ಚಾಗಿದೆ. ನಾವೇನು ಆಪರೇಶನ್ ಕಮಲ ಮಾಡುತ್ತಿಲ್ಲ ಎಂದರು.

ಒಳಜಗಳದಿಂದ ಸರ್ಕಾರ ಬಿದ್ದರೆ ನಾವು ಸುಮ್ಮನೆ ಕೂರಲ್ಲ. ನಾವು ಮಠ ಕಟ್ಟಿಲ್ಲ, ರಾಜಕಾರಣ ಮಾಡಲು ಬಂದಿರುವುದಾಗಿ. ಹೀಗಾಗಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನ ಬೇರೆ ಶಾಸಕರಿಂದ ಸಮ್ಮಿಶ್ರ ಸರ್ಕಾರ ಪತನವಾದರೆ ನಾವು ಜವಾಬ್ದಾರರಲ್ಲ, ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಸತೀಶ್ ಜಾರಿಕಿಹೊಳಿ ಮೈತ್ರಿ ಸರ್ಕಾರ ಅಪಾಯದಲ್ಲಿದೆ ಎಂಬ ಸುಳಿವು ನೀಡಿದ ಬೆನ್ನಲ್ಲೇ ಬಿಜೆಪಿ ಈ ಹೇಳಿಕೆಯನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next