Advertisement

30ರಿಂದ ಲಾರಿ, ಬಸ್‌ಗಳ ಅನಿರ್ದಿಷ್ಟಾವಧಿ ಮುಷ್ಕರ

11:14 AM Mar 19, 2017 | |

ಬೆಂಗಳೂರು: ಮೂರನೇ ವ್ಯಕ್ತಿ ವಿಮೆ (ಥರ್ಡ್‌ ಪಾರ್ಟಿ ಇನ್‌ಶುರೆನ್ಸ್‌) ಪ್ರೀಮಿಯಂ ದರ ದುಪ್ಪಟ್ಟು, 15 ವರ್ಷಗಳಹಳೆಯ ವಾಹನ ನಿಷೇಧ, ರಾಜ್ಯ ಹೆದ್ದಾರಿಗಳಲ್ಲೂ ಟೋಲ್‌ ಸಂಗ್ರಹ ತೀರ್ಮಾನ ಖಂಡಿಸಿ ಮಾ.30ರಿಂದ ದಕ್ಷಿಣ ಭಾರತದ 6 ರಾಜ್ಯಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ದಕ್ಷಿಣ ವಲಯದ ವಾಣಿಜ್ಯ ಸೇವಾ ವಾಹನಗಳ ಮಾಲಿಕರ ಸಂಘ ನಿರ್ಧರಿಸಿದೆ. ಲಾರಿ ಮುಷ್ಕರಕ್ಕೆ ಖಾಸಗಿ ಬಸ್‌, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌, ಪ್ರವಾಸಿ ವಾಹನಗಳ ಮಾಲಿಕರ ಸಂಘಗಳು ಕೈ ಜೋಡಿಸಿದ್ದು, 30ರಂದು ಬೆಳಗ್ಗೆಯಿಂದಲೇ ಈ ಎಲ್ಲ ವಾಹನಗಳು ರಸ್ತೆಗಿಳಿಯುವುದಿಲ್ಲ ಎಂದು ದಕ್ಷಿಣ ವಲಯದ ವಾಣಿಜ್ಯ ಸೇವಾ ವಾಹನಗಳ ಮಾಲಿಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್‌. ಷಣ್ಮುಗಪ್ಪ ತಿಳಿಸಿದ್ದಾರೆ.

Advertisement

ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ ಸೇರಿದಂತೆ 6 ರಾಜ್ಯಗಳಲ್ಲಿ ವಾಣಿಜ್ಯ ಸೇವಾ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಈ ಅವೈಜ್ಞಾನಿಕ ನಿರ್ಧಾರಗಳಿಂದ ಹಿಂದೆ ಸರಿಯುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ
“ಉದಯವಾಣಿ’ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲೇ ಲಾರಿ ಸೇರಿ 20 ಲಕ್ಷ ವಾಣಿಜ್ಯ ಸೇವೆಯ ವಾಹನಗಳಿವೆ. ವಿಮಾ ಮೊತ್ತ ದುಪ್ಪಟ್ಟುಗೊಳಿಸುವುದರಿಂದ ಹೊರೆಯಾಗಲಿದೆ. 5-10 ವರ್ಷದ ಇಂಡಿಕಾ ಕಾರುಗಳ ಬೆಲೆಯೇ 70 ರಿಂದ 80 ಸಾವಿರ ರೂ. ಇರುತ್ತದೆ. ಆದರೆ, ಅದಕ್ಕೆ ಥರ್ಡ್‌ ಪಾರ್ಟಿ ಇನ್‌ಶುರೆನ್ಸ್‌ ಮೊತ್ತವೇ 50 ಸಾವಿರ ರೂ. ಆಗುತ್ತದೆ. ಬರೀ ಲಾರಿಗಳಿಂದಲೇ ಮಾಲಿನ್ಯ ಆಗುತ್ತಿದೆಯೇ? ಕೈಗಾರಿಕೆಗಳು ಹೊಗೆ ಉಗುಳುತ್ತಿಲ್ಲವೇ? 3ರಿಂದ 4 ಲಕ್ಷ ವಾಹನಗಳು 15 ವರ್ಷ ಮೀರಿವೆ.ಅವುಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next