ಹೊಸದಿಲ್ಲಿ : ಅತ್ಯಂತ ನಿರ್ಲಜ್ಜೆಯ ಪ್ರಕರಣವಾಗಿ ಮೂರು ವರ್ಷದ ಬಾಲೆಯ ಮೇಲೆ ಆಕೆಯ ನೆರೆಮನೆಯ ತರುಣನೋರ್ವ ಅತ್ಯಾಚಾರ ಎಸಗಿದ ಘಟನೆ ಮಧ್ಯ ದಿಲ್ಲಿಯ ಆನಂದ್ ಪ್ರಭಾತ್ ಪ್ರದೇಶದಲ್ಲಿ ನಡೆದಿದೆ.
ಮೂರು ವರ್ಷದ ಬಾಲೆ ತಾನೊಬ್ಬಳೇ ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ 22ರ ಹರೆಯದ ಆಕೆಯ ನೆರೆಮನೆಯ ತರುಣ ಆಕೆಯನ್ನು ತನ್ನ ಮನೆಗೆ ಒಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ.
ಬಾಲಕಿಯ ಮನೆಯವರು ಆಕೆಯನ್ನು ಕಾಣದೆ ಹುಡುಕಾಟ ನಡೆಸಿದಾಗ ಯಾರೋ ಕೆಲವು ನೆರೆಯವರು ಆರೋಪಿ ತರುಣನು ಮಗುವನ್ನು ಹೊತ್ತೂಯ್ಯುತ್ತಿದ್ದುದನ್ನು ತಾವು ಕಂಡೆವೆಂದು ಹೇಳಿದರು.
ಒಡನೆಯೇ ಬಾಲಕಿಯ ಹೆತ್ತವರು ಆರೋಪಿ ತರುಣನ ಮನೆಗೆ ಹೋಗಿ ನೋಡಿದಾಗ ಅಲ್ಲಿ ಬಾಲಕಿಯು ರಕ್ತ ಸ್ರಾವದಿಂದ ಬಿದ್ದುಕೊಂಡಿರುವುದನ್ನು ಕಂಡರು.
ಒಡನೆಯೇ ಬಾಕಿಯನ್ನು ಅವರು ಆಸ್ಪತ್ರೆಗೆ ಒಯ್ದರು. ಅಲ್ಲಿ ಬಾಲಕಿಯ ಮೇಲೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದರು. ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದು ಈಗ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಆರೋಪಿ ತರುಣನನ್ನು ಪೊಲೀಸರು ಆತನ ಸ್ನೇಹಿತನ ಮನೆಯಿಂದ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.