Advertisement

Dudhsagar: ದೂದ್ ಸಾಗರ ಜಲಪಾತದಲ್ಲಿ ಮುಳುಗುತ್ತಿದ್ದ 3 ವರ್ಷದ ಬಾಲಕಿಯ ರಕ್ಷಣೆ

04:52 PM May 23, 2024 | Team Udayavani |

ಪಣಜಿ: ದೂದ್ ಸಾಗರ ಜಲಪಾತದಲ್ಲಿ ಸ್ನಾನಕ್ಕೆಂದು ಇಳಿದಿದ್ದ 3 ವರ್ಷದ ಬಾಲಕಿ ಮುಳುಗುತ್ತಿದ್ದ ಸಂದರ್ಭದಲ್ಲಿ ದೃಷ್ಟಿಯ ಜೀವರಕ್ಷಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಬಾಲಕಿ ಹೈದರಾಬಾದ್ ಮೂಲದವರು ಎನ್ನಲಾಗಿದೆ.

Advertisement

ಹೈದರಾಬಾದ್‍ನಿಂದ ಪ್ರವಾಸಿಗರ ತಂಡವೊಂದು ಸೋಮವಾರ ದೂದ್ ಸಾಗರ ಜಲಪಾತ ವೀಕ್ಷಣೆಗೆ ಆಗಮಿಸಿತ್ತು. ಜಲಪಾತದಲ್ಲಿ ಸ್ನಾನಕ್ಕೆಂದು ತಂದೆ 3 ವರ್ಷದ ಬಾಲಕಿಯೊಂದಿಗೆ ನೀರಿಗೆ ಇಳಿದಿದ್ದರು. ಆದರೆ 3 ವರ್ಷದ ಬಾಲಕಿ ಕಲ್ಲಿನ ಮೇಲೆ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ನಂತರ ಸಮೀಪದಲ್ಲೇ ಇದ್ದ ಜೀವರಕ್ಷಕರು ಆಕೆಯನ್ನು ನೀರಿನಿಂದ ಹೊರತೆಗೆದಿದ್ದಾರೆ. ಬಾಲಕಿ ಸುರಕ್ಷಿತವಾಗಿದ್ದಾಳೆ.

ಗೋವಾದ ದೂದ್ ಸಾಗರ ಜಲಪಾತ ಜಗತ್ಪ್ರಸಿದ್ಧ ಜಲಪಾತವಾಗಿದೆ. ಈ ಜಲಪಾತ ವೀಕ್ಷಣೆಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಎಚ್ಚರಿಕೆಯಿಂದ ಆಗಮಿಸಬೇಕು ಎಂದು ಜೀವರಕ್ಷಕ ದಳ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next