Advertisement

ಮಂಗಳೂರು ಸಹಿತ 3 ಘಟಕ ನಷ್ಟದಲ್ಲಿ: ಅಂಗಾರ

01:34 AM Feb 04, 2021 | Team Udayavani |

ಬೆಂಗಳೂರು: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬರುವ 9 ಘಟಕಗಳ ಪೈಕಿ ಮಂಗಳೂರು ಮೀನು ಸರಬರಾಜು ಘಟಕ, ಹೊನ್ನಾವರ ಪರ್ಸೀನ್‌ ಮೀನು ಮಾರಾಟ ಘಟಕ ಮತ್ತು ಕಾರವಾರ ಡೀಸೆಲ್‌ ಮತ್ತು ಮಂಜುಗಡ್ಡೆ ಮಾರಾಟ ಘಟಕಗಳು ನಷ್ಟದಲ್ಲಿವೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಎಚ್‌.ಎಂ. ರಮೇಶ್‌ಗೌಡ ಪಶ್ನೆಗೆ ಉತ್ತರಿಸಿದ ಸಚಿವರು, ಮೀನಿನ ವ್ಯಾಪಾರ ವಹಿವಾಟು ಕುಂಠಿತ ಗೊಂಡಿರುವುದರಿಂದ ಮಂಗಳೂರು ಹಾಗೂ ಹೊನ್ನಾವರ ಘಟಕ ಮತ್ತು ಮಂಜುಗಡ್ಡೆ ಮಾರಾಟ ವಹಿವಾಟು ಕುಂಠಿತಗೊಂಡಿರುವುದರಿಂದ ಕಾರ ವಾರ ಘಟಕ ನಷ್ಟದಲ್ಲಿದೆ. ಮಂಗಳೂರು ಮತ್ತು ಹೊನ್ನಾವರ ಘಟಕಗಳನ್ನು ಲಾಭದಾಯಕವನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ನಿಗಮವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 21 ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ, ಮತ್ಸ್ಯದರ್ಶಿನಿ ಉಪಹಾರ ಗೃಹಗಳನ್ನು ಸ್ಥಾಪಿಸಲಾಗಿದೆ. ಮಂಗಳೂರಿನಲ್ಲಿ ಯೂರೋಪಿಯನ್‌ ಒಕ್ಕೂಟ ರಾಷ್ಟ್ರಗಳಿಗೆ ಮೀನು ರಫ್ತು ಮಾಡುವ ಪರವಾನಿಗೆ ಹೊಂದಿರುವ ಆಧುನಿಕ ಮೀನು ಸಂಸ್ಕರಣಾ ಸ್ಥಾವರ ನಿರ್ಮಿಸಲಾಗಿದೆ ಎಂದರು.

ನಬಾರ್ಡ್‌ ಹಾಗೂ ರಾಜ್ಯ ಸರಕಾರದ ಯೋಜನೆಯಡಿ ದ.ಕ. ಜಿಲ್ಲೆಯ ಸುಳ್ಯ, ಉಡುಪಿ ಜಿಲ್ಲೆಯ ತೆಕ್ಕಟ್ಟೆ, ಸಾಸ್ತಾನ, ಕುಂದಾಪುರ ಸಹಿತ ವಿವಿಧ ಕಡೆ ಮೀನು ಮಾರುಕಟ್ಟೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ ಸುಳ್ಯ, ತೆಕ್ಕಟ್ಟೆ, ಸಾಸ್ತಾನದ ಮೀನು ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಇಲಾಖೆಯ ಅನುದಾನದಡಿ ಮಂಗಳೂರು ಮತ್ತು ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ತಲಾ ಒಂದು ಕಾಂಕ್ರೀಟ್‌ ತೇಲುವ ಜೆಟ್ಟಿ ನಿರ್ಮಾಣ ಯೋಜನೆಯನ್ನು ನಿಗಮದಿಂದ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಳೆಯಂಗಡಿಯಲ್ಲಿ ಮೀನು ಮಾರು
ಕಟ್ಟೆ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಅಂಗಾರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪ್ರೇಯಸಿಯ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ವ್ಯಕ್ತಿ

Advertisement

ಹುದ್ದೆಗಳ ಭರ್ತಿಗೆ ಕ್ರಮ
ನಿಗಮದಲ್ಲಿ 82 ಖಾಯಂ ಹಾಗೂ 138 ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 138 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದವರು ಭರವಸೆ ನೀಡಿದರು.

24 ಸುಸಜ್ಜಿತ ಮೀನು ಮಾರುಕಟ್ಟೆ
ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ದ.ಕ. ಜಿಲ್ಲೆಯ ಬಜಪೆ, ಕೆಮ್ರಾಲ್‌, ಮಂಗಳಪೇಟೆ, ಸಿದ್ಧಕಟ್ಟೆ, ಮಾಣಿ, ಗಂಜಿಮಠ. ಉಡುಪಿ ಜಿಲ್ಲೆಯ ವಾರಂಬಳ್ಳಿ, ಮೂಡುಬೆಳ್ಳೆ, ಹೆಜಮಾಡಿ, ಕೋಟೇಶ್ವರ, ಹುಣ್ಸೆಮಕ್ಕಿ, ಕುಂಜಿಬೆಟ್ಟು, ಸಂತೆಕಟ್ಟೆ, ಪರ್ಕಳ, ಬಸ್ರೂರು, ಅಮಾಸೆಬೈಲ್‌, ಗಂಗೊಳ್ಳಿ, ಕಂಡ್ಲೂರು, ಅಂಪಾರು ಮತ್ತು ಅಂಬಾಗಿಲು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೋಡಿಬಾಗ್‌, ಅಮದಳ್ಳಿ, ಅವರ್ಸಾ ಮತ್ತು ಹೆಬಳೆ ಸೇರಿ ಒಟ್ಟು 24 ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ನಿರ್ಮಿಸಿ ಆಯಾ ಗ್ರಾಮ ಪಂಚಾಯತ್‌ಗಳಿಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next