Advertisement

Van steal: ವಾಹನ ಕದಿಯಲು ಹೋದ ಮೂವರಿಗೂ ಡ್ರೈವಿಂಗ್‌ಗೇ ಬರಲ್ಲ.. ಮುಂದೇನಾಯ್ತು? 

04:45 PM May 24, 2023 | Team Udayavani |

ಕಾನ್ಪುರ: ಕೆಲ ಕಳ್ಳರು ಅತೀ ಬುದ್ದಿವಂತರಾಗಿರುತ್ತಾರೆ. ಆದರೆ ಒಂದಲ್ಲ ಒಂದು ತಪ್ಪನ್ನು ಎಂತಹ ಬುದ್ದಿವಂತ ಕಳ್ಳ ಮಾಡೇ ಇರುತ್ತಾನೆ. ಮೂವರು ಚಿಗುರು ಮೀಸೆಯ ಹುಡುಗರು ವ್ಯಾನ್‌ ವೊಂದನ್ನು ಕದ್ದ ಘಟನೆಯಿದು.

Advertisement

ಸತ್ಯಂ ಕುಮಾರ್, ಅಮನ್ ಗೌತಮ್ ಮತ್ತು ಅಮಿತ್ ವರ್ಮಾ ಮಾರುತಿ ವ್ಯಾನ್‌ ಕದ್ದು ಸಿಕ್ಕಿಬಿದ್ದ ಆರೋಪಿಗಳು.

ಸತ್ಯಂ ಮಹಾರಾಜಪುರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಓದುತ್ತಿದ್ದರೆ, ಅಮನ್ ಡಿಬಿಎಸ್ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ, ಅಮಿತ್ ಉದ್ಯೋಗವೊಂದನ್ನು ಮಾಡುತ್ತಿದ್ದಾನೆ.

ಇತ್ತೀಚೆಗೆ ಮೂವರು ಮಾರುತಿ ವ್ಯಾನ್‌ ವೊಂದನ್ನು ಕದಿಯುವ ಯೋಜನೆಯನ್ನು ಮಾಡಿದ್ದಾರೆ. ಅಂದುಕೊಂಡ ಹಾಗೆ ವ್ಯಾನ್‌ ಕದಿದ್ದಾರೆ. ಆದರೆ ಮೂವರಿಗೆ  ವ್ಯಾನ್‌ ಚಲಾಯಿಸುವುದು ಹೇಗೆಂದು ಗೊತ್ತಿಲ್ಲ. ಮೂವರಲ್ಲಿ ಯಾರಿಗೂ ಡ್ರೈವಿಂಗ್‌ ಬರುವುದಿಲ್ಲ. ದಬೌಲಿಯಿಂದ ಕಲ್ಯಾಣಪುರದವರೆಗೆ 10 ಕಿ.ಮೀ.ವರೆಗೆ ರಾತ್ರೋ ರಾತ್ರಿ ವ್ಯಾನ್ ದೂಡಿಕೊಂಡು ಸುರಕ್ಷಿತ ಜಾಗವೊಂದರಲ್ಲಿ ಇಟ್ಟಿದ್ದಾರೆ.

ಮೇ.7 ರಂದು ವ್ಯಾನ್‌ ಕಳ್ಳತನ ಮಾಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

Advertisement

ಕದ್ದ ವಾಹನಗಳನ್ನು ಮಾರುತ್ತಿದ್ದ ತಂಡ: ವಾಹನ ಕದಿಯುವ ಯೋಜನೆಯನ್ನು ರೂಪಿಸಿದ್ದು ಅಮಿತ್‌ ಎನ್ನುವ ಯುವಕ. ಅಮಿತ್‌ ತಾನೇ ವೊಂದು ವೆಬ್‌ ಸೈಟ್‌ ವೊಂದನ್ನು ಮಾಡಿದ್ದು, ಮಾರುಕಟ್ಟೆಯಲ್ಲಿ ಸೇಲ್‌ ಆಗದ ವಾಹನವನ್ನು ಅಮಿತ್‌ ಮತ್ತು ಆತನ ಸ್ನೇಹಿತರು ನಂಬರ್‌ ಪ್ಲೇಟ್‌ ಗಳನ್ನು ತೆಗೆದು ವೆಬ್‌ ಸೈಟ್‌ ನಲ್ಲಿ ಫೋಟೋ ತೆಗೆದು ಹಾಕುತ್ತಿದ್ದರು ಎಂದು ಪೊಲೀಸರು ತನಿಖೆ ಬಳಿಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next