Advertisement

ವಿಶ್ವವನ್ನು ಒಂದು ಗೂಡಿಸಿದೆ ಯೋಗ: ಲಕ್ನೋದಲ್ಲಿ ಮೋದಿ,ಯೋಗಿ ಆಸನ

08:52 AM Jun 21, 2017 | Team Udayavani |

ಹೊಸದಿಲ್ಲಿ/ಲಕ್ನೋ: ಇಂದು ಜೂನ್‌ 21 ಬುಧವಾರ ವಿಶ್ವಾದ್ಯಂತ 3 ನೇ ಅಂತರಾಷ್ಟ್ರೀಯ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಲಕ್ನೋದ ರಮಾಬಾಯಿ ಅಂಬೇಡ್ಕರ್‌ ಮೈದಾನದಲ್ಲಿ ನಡೆದ ಬೃಹತ್‌ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿ ಯೋಗಾಸನಗಳನ್ನು ಮಾಡಿದರು. 

Advertisement

ಸಮಾರಂಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಸಚಿವರು, ಶಾಸಕರು ಮತ್ತು 50 ಸಾವಿರಕ್ಕೂ ಹೆಚ್ಚು  ಜನರು ಭಾಗಿಯಾಗಿದ್ದರು. 

ಸಮಾರಂಭದಲ್ಲಿ ಜನತೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ ದೇಹ, ಮನಸ್ಸು ಮತ್ತು ಆತ್ಮವನ್ನು ಒಟ್ಟುಗೂಡಿಸುವ ಸಾಮರ್ಥ್ಯ ಹೊಂದಿರುವ ಯೋಗ ಭಾಷಾ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಿ ಇಂದು ಜಾಗತಿಕ ಸಮುದಾಯವನ್ನು ಒಂದು ಗೂಡಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next