Advertisement
ಅಟ್ಟಾಡಿಸಿದ ಸ್ಥಳೀಯರು: ಕಾನ್‌ಸ್ಟೆಬಲ್ ನಿಸಾರ್ ಅಹಮದ್, ವಿಶೇಷ ಪೊಲೀಸ್ ಅಧಿಕಾರಿಗಳಾದ ಫಿರ್ದೋಸ್ ಅಹಮದ್ ಮತ್ತು ಕುಲ್ವಂತ್ ಸಿಂಗ್‌ರನ್ನು ಉಗ್ರರು ಅಪಹರಿಸಿ ಹತ್ಯೆಗೈದಿದ್ದಾರೆ. ಶುಕ್ರವಾರ ಬೆಳಗ್ಗೆ ಬಟಾಗುಂಡ್ ಗ್ರಾಮಕ್ಕೆ ಉಗ್ರರು ಬಂದು ಓರ್ವ ಪೊಲೀಸ್ ಸಿಬ್ಬಂದಿಯ ಅಪಹರಿಸಿ ವಾಹನದಲ್ಲಿ ಕರೆದೊಯ್ಯು ತ್ತಿದ್ದಾಗ ಸ್ಥಳೀಯರು ತಡೆಯಲು ಯತ್ನಿಸಿದ್ದಾರೆ. ಸ್ವಲ್ಪ ದೂರದವರೆಗೆ ಉಗ್ರ ರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಆದರೆ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿ, ಸ್ಥಳೀಯರನ್ನು ಚದುರಿಸಿದ್ದಾರೆ. ನಂತರ ಗ್ರಾಮದಲ್ಲಿರುವ ನದಿಯ ಇನ್ನೊಂದು ದಡಕ್ಕೆ ಪೊಲೀಸರನ್ನು ಕರೆದು ಕೊಂಡು ಹೋಗಿ ಗುಂಡು ಹಾರಿಸಿ ಹತ್ಯೆ ಗೈದಿದ್ದಾರೆ. ನಂತರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡು ಈ ಘಟನೆಗೆ ನಾವೇ ಕಾರಣ ಎಂದು ಹೇಳಿಕೊಂಡಿದ್ದಾರೆ.
Related Articles
ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ್ದೇವೆ ಎಂದು ಹೇಳುತ್ತಿರುವ ವಿಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇವರು ಪೊಲೀಸರೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅಲ್ಲದೆ, ಇದು ಸುಳ್ಳು ಸುದ್ದಿ ಹಬ್ಬಿಸಲು ಉಗ್ರರ ಸಂಚು ಎಂದೂ ರಾಜ್ಯ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ಯಾರೂ ರಾಜೀನಾಮೆ ನೀಡಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಎಸ್‌ಪಿಒಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇವರ ಅವಧಿಯನ್ನು ನವೀಕರಿಸಲಾಗುತ್ತಿದೆ. ಆದರೆ ಕೆಲವರನ್ನು ಕಾರಣಾಂತರಗಳಿಂದ ನವೀಕರಿಸಿಲ್ಲ. ಅಂಥವರನ್ನು ಬಳಸಿಕೊಂಡು ಉಗ್ರರು ವಿಡಿಯೋ ಪ್ರಕಟಿಸಿ, ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಗೃಹ ಇಲಾಖೆ ವಿವರಿಸಿದೆ. ಜಮ್ಮು ಕಾಶ್ಮೀರದ ಪೊಲೀಸರ ಶ್ರಮದಿಂದಾಗಿ ಉಗ್ರರು ಹಿಮ್ಮೆಟ್ಟಿದ್ದಾರೆ. ಶೋಪಿಯಾನ್‌ನಲ್ಲೇ ಈ ವರ್ಷ 28 ಉಗ್ರರನ್ನು ಹತ್ಯೆಗೈಯಲಾಗಿದೆ. ಇದು ಅವರನ್ನು ಚಿಂತೆಗೀಡು ಮಾಡಿದ್ದು, ಪೊಲೀಸರನ್ನು ಟಾರ್ಗೆಟ್ ಮಾಡಲಾಗುತ್ತಿದೆ.
Advertisement
ಉಗ್ರರ ಹೀನ ಕೃತ್ಯದಲ್ಲಿ ನಮ್ಮ ಮೂವರು ಸಹೋದ್ಯೋಗಿಗಳು ಹುತಾತ್ಮರಾಗಿದ್ದಾರೆ. ಉಗ್ರರನ್ನು ಶೀಘ್ರ ದಲ್ಲೇ ಬಂಧಿಸಿ, ಹೆಡೆಮುರಿ ಕಟ್ಟುತ್ತೇವೆಸ್ವಯಂ ಪ್ರಕಾಶ್ ಪನಿ, ಕಾಶ್ಮೀರದ ಐಜಿಪಿ ಕೇಂದ್ರದ ಬಲಪ್ರಯೋಗ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಇನ್ನು ಮಾತುಕತೆ ಯಂತೂ ದೂರದ ಮಾತೇ ಸರಿ.
ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರ ಮಾಜಿ ಸಿಎಂ