Advertisement

Karnataka ರಾಜ್ಯದಲ್ಲೂ 3 ಹೊಸ ಕಾನೂನು ಜಾರಿ

12:17 AM Jul 01, 2024 | Team Udayavani |

ಬೆಂಗಳೂರು: ದೇಶದ ಹಳೇ ಕಾನೂನುಗಳಿಗೆ ಹೊಸ ಸ್ವರೂಪ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ(Central Govt)
ಮಹತ್ತರ ಬದಲಾವಣೆ ಮಾಡಿ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್‌ಎ) ಜುಲೈ 1ರಂದು ಅಧಿಕೃತವಾಗಿ ಜಾರಿ ಆಗಲಿವೆ.

Advertisement

ಹೊಸ ಕಾಯ್ದೆಗಳ ಬಗ್ಗೆ ಕಳೆದ ಒಂದೂವರೆ ತಿಂಗಳಿಂದ ಕಾನ್‌ಸ್ಟೆಬಲ್‌ನಿಂದ ಎಸ್‌ಪಿ/ಡಿಸಿಪಿ ಹಂತದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಹೊಸ ಕಾಯ್ದೆಗಳ ಕಲಂಗಳ ಅಡಿಯಲ್ಲಿ ಎಫ್ಐಆರ್‌ ದಾಖಲಿಸುವಾಗ ಬಹಳ ಎಚ್ಚರವಹಿಸಬೇಕು. ಕಲಂಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಎಫ್ಐಆರ್‌ಗಳಲ್ಲಿ ಸೇರ್ಪಡೆ ಮಾಡಬೇಕು. ಯಾವುದೇ ಕಾರಣಕ್ಕೂ ಗೊಂದಲಕ್ಕೆ ಎಡೆಮಾಡಿಕೊಡಬಾರದು.

ಗೊಂದಲವಾದರೆ ಇಡೀ ಇಲಾಖೆಗೆ ಮುಜುಗರವಾಗುತ್ತದೆ. ಹಾಗೂ ಗೊಂದಲ ಉಂಟಾದರೆ ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಲಹೆ ಮೇರೆಗೆ ಎಫ್ಐಆರ್‌ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಪೊಲೀಸ್‌ ಐಟಿಯಲ್ಲೂ ಬದಲಾವಣೆ
ಹೊಸ ಕಾಯ್ದೆ-ಕಲಂಗಳು, ಎಫ್ಐಆರ್‌ನಲ್ಲಿ ಮಾತ್ರವ ಲ್ಲದೆ ಪೊಲೀಸ್‌ ಐಟಿಯಲ್ಲೂ ಬದಲಾವಣೆ ಆಗಿದೆ.

ಎಫ್ಐಆರ್‌ ಜತೆಗೆ ಇಲ್ಲಿಯೂ ಬಿಎನ್‌ಎಸ್‌, ಬಿಎನ್‌ಎಸ್‌ಎಸ್‌ ಮತ್ತು ಬಿಎಸ್‌ಎ ಕಾಯ್ದೆಗಳ ಬಗ್ಗೆಯೂ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಸಿದ್ಧಪಡಿಸಲಾಗಿದೆ.

ಬಿಎನ್‌ಎಸ್‌ ಕಾಯ್ದೆ
ಅನುಷ್ಠಾನ ಕುರಿತು ಈಗಾಗಲೇ ಇಲಾಖೆಯ ಎಲ್ಲ ಹಂತದ ಅಧಿಕಾರಿ-ಸಿಬಂದಿಗೆ ತರಬೇತಿ ನೀಡಲಾಗಿದೆ. ಮೈಸೂರು ಪೊಲೀಸ್‌ ಅಕಾಡೆಮಿ ಯಿಂದ ಕನ್ನಡದಲ್ಲೇ ಕೈಪಿಡಿಯನ್ನು ಸಿದ್ಧಪಡಿಸಿ ವಿತರಿಸಲಾಗಿದೆ. ಅದೇ ಪ್ರಕಾರ ಜುಲೈ 1ರಿಂದ ಠಾಣಾ ಪೊಲೀಸರು ಬಿಎನ್‌ಎಸ್‌ ಕಾಯ್ದೆಗಳನ್ನು ಉಲ್ಲೇಖಿಸಿ ಎಫ್ಐಆರ್‌ ದಾಖಲಿಸಿದ್ದಾರೆ.
– ಬಿ. ದಯಾನಂದ,
ನಗರ ಪೊಲೀಸ್‌ ಆಯುಕ್ತ

Advertisement
Advertisement

Udayavani is now on Telegram. Click here to join our channel and stay updated with the latest news.

Next