Advertisement

ನ್ಯೂಯಾರ್ಕ್ ನಲ್ಲಿ ಭೀಕರ ರಸ್ತೆ ಅಪಘಾತ : ಭಾರತದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

09:09 AM Oct 28, 2022 | Team Udayavani |

ನ್ಯೂಯಾರ್ಕ್: ಪಶ್ಚಿಮ ಮೆಸಾಚುಸೆಟ್ಸ್‌ನಲ್ಲಿ ಕಾರು ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

Advertisement

ಪ್ರೇಮ್ ಕುಮಾರ್ ರೆಡ್ಡಿ ಗೋಡಾ (27), ಪಾವನಿ ಗುಲ್ಲಪಲ್ಲಿ (22) ಮತ್ತು ಸಾಯಿ ನರಸಿಂಹ ಪಟಂಶೆಟ್ಟಿ (22) ಮೃತ ವಿದ್ಯಾರ್ಥಿಗಳು.

ಮುಂಜಾನೆ 5:30 ರ ವೇಳೆಗೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ನಾಲ್ವರು ಮನೋಜ್ ರೆಡ್ಡಿ ದೊಂಡ, ಶ್ರೀಧರ್ ರೆಡ್ಡಿ ಚಿಂತಕುಂಟಾ, ವಿಜಿತ್ ರೆಡ್ಡಿ ಗುಮ್ಮಲ ಮತ್ತು ಹಿಮಾ ಐಶ್ವರ್ಯ ಸಿದ್ದಿರೆಡ್ಡಿ ಗಂಭೀರ ಗಾಯಗೊಂಡಿದ್ದು ಅವರನ್ನು ಬರ್ಕ್‌ಶೈರ್ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆರು ಮಂದಿ ನ್ಯೂ ಹೆವನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರೆ ಒಬ್ಬರು ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಉದ್ಯಮಿ ಎಲಾನ್ ಮಸ್ಕ್ ಸುಪರ್ದಿಗೆ ಟ್ವಿಟರ್ : ಸಿಇಒ ಪರಾಗ್ ಅಗರ್​ವಾಲ್ ಸೇರಿ ಹಲವರು ವಜಾ

Advertisement
Advertisement

Udayavani is now on Telegram. Click here to join our channel and stay updated with the latest news.

Next