Advertisement
ಮುಂಡಾಜೆ ಗ್ರಾಮದ ಕಡಂಬಳ್ಳಿ ಸಮೀಪ ಗುಡ್ಡದಲ್ಲಿ ಬೆಂಕಿ ಉಂಟಾಗಿ ಭೀತಿಯ ವಾತಾವರಣ ಸೃಷ್ಟಿಯಾಯಿತು. ವಿದ್ಯುತ್ ಪರಿವರ್ತಕದಿಂದ ಸಿಡಿದ ಕಿಡಿಗಳಿಂದ ಉಂಟಾದ ಬೆಂಕಿ ಸಮೀಪದ ಗುಡ್ಡವನ್ನು ಆವರಿಸಿ, ರಬ್ಬರ್ ತೋಟಕ್ಕೂ ನುಗ್ಗಿತು.
Related Articles
ಸಮಯಕ್ಕೆ ಸಿಗದ ಅಗ್ನಿಶಾಮಕ ವಾಹನ.
Advertisement
ಮುಂಡಾಜೆಯ ಕಡಂಬಳ್ಳಿ ಪರಿಸರದಲ್ಲಿ ಬೆಂಕಿ ಕಂಡುಬಂದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲು ಬಿಎಸ್ಸೆಎನ್ನೆಲ್‌ನ ನೆಟ್‌ವರ್ಕ್ ಸಮಸ್ಯೆ ಅಡ್ಡಿಯಾಯಿತು. ಇದರಿಂದ ಅಗತ್ಯ ದೂರವಾಣಿ ಸಂಖ್ಯೆಗಳಿಗೆ ಕರೆ ಸಿಗದೆ ಪರದಾಟ ನಡೆಸಬೇಕಾಯಿತು. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಕರೆ ಮಾಡಲಾಯಿತು. ಆದರೆ ಅಲ್ಲಿರುವ ಎರಡು ವಾಹನಗಳು ಬೇರೆಡೆಗೆ ತೆರಳಿದ್ದ ಕಾರಣದಿಂದ ಸಮಯಕ್ಕೆ ಸೇವೆ ದೊರೆಯದೆ ಬೆಂಕಿ ಪ್ರಕರಣ ನಡೆದ ಸುಮಾರು ಮೂರು ಗಂಟೆಗಳ ಬಳಿಕವಷ್ಟೇ ವಾಹನ ಆಗಮಿಸಿತು.
ಡಿ.ಎಫ್.ಒ. ಭೇಟಿಮುಂಡಾಜೆಯ ಕಡಂಬಳ್ಳಿ ಹಾಗೂ ಇನ್ನಿತರ ಬೆಂಕಿ ಅನಾಹುತ ಉಂಟಾದ ಸ್ಥಳಗಳಿಗೆ ಜಿಲ್ಲಾ ಅಗ್ನಿಶಾಮಕ ದಳದ ಡಿ ಎಫ್ ಒ ಭರತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು. ಮೆಸ್ಕಾಂ ಜೆಇ ಕೃಷ್ಣೇಗೌಡ, ಸಮಾಜಸೇವಕ ಸಚಿನ್ ಭಿಡೆ ಮತ್ತಿತರರು ಇದ್ದರು.