Advertisement

ಉತ್ತರ ಪ್ರದೇಶ: ಮತ್ತೆ ಹಳಿ ತಪ್ಪಿದ ರೈಲು; 3ಸಾವು 9 ಮಂದಿಗೆ ಗಾಯ

08:09 AM Nov 24, 2017 | |

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಬಾಂದ್ರ ಜಿಲ್ಲೆಯ ಚಿತ್ರಕೂಟದಲ್ಲಿ ಶುಕ್ರವಾರ ನಸುಕಿನ ಜಾವ ಪಾಟ್ನಾ ಗೋವಾ ಮಾರ್ಗದಲ್ಲಿ ವಾಸ್ಕೋಡಿಗಾಮ ಪಾಟ್ನಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು  ಮೂವರು ಸಾವನ್ನಪ್ಪಿ 9 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

ರೈಲಿನ ಸುಮಾರು 13 ಬೋಗಿಗಳು ಹಳಿ ತಪ್ಪಿ ಈ ಅವಘಡ ಸಂಭವಿಸಿದೆ. ಈ ಘಟನೆಯಿಂದ ಪಾಟ್ನಾ ಮತ್ತು ಗೋವಾ ನಡುವಿನ ಸಂಚಾರ ಅಸ್ತವ್ಯಸ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಹೆಚ್ಚಿನ ಮಾಹಿತ ನಿರಿಕ್ಷೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next