Advertisement
ಬೆಂಗಳೂರು ಸೇರಿದಂತೆ ರಾಜ್ಯದ ಬಹುಭಾಗಗಳಲ್ಲಿ ಬೆಳಿಗ್ಗೆಯಿಂದಲೇ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ ಮತ್ತು ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು, ಕ್ರಮವಾಗಿ 102.9 ಮಿ.ಮೀ. ಹಾಗೂ 90 ಮಿ.ಮೀ.ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಒಟ್ಟಾರೆ ಮಳೆ ಹಂಚಿಕೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅಧಿಕ ಮಳೆಯಾಗಿದೆ. ಧಾರವಾಡದಲ್ಲಿ 85 ಮಿ.ಮೀ., ಹಾವೇರಿಯಲ್ಲಿ 43, ಚಿತ್ರದುರ್ಗದಲ್ಲಿ 55.4, ಕೊಪ್ಪಳದಲ್ಲಿ 40.4, ಗದಗ 35.4, ಬೆಳಗಾವಿ 46.5, ಬಳ್ಳಾರಿ 29.2, ಕಲಬುರಗಿ 29, ರಾಯಚೂರು 20, ಬಾಗಲಕೋಟೆ 25.5 ಮಿ.ಮೀ. ಮಳೆಯಾಗಿದೆ. ಉಳಿದಂತೆ ಮಂಡ್ಯದಲ್ಲಿ 83, ದಕ್ಷಿಣ ಕನ್ನಡ 43, ಹಾಸನ 35.4, ಮೈಸೂರು 59, ಬೆಂಗಳೂರು ನಗರ ಮತ್ತು ಕೋಲಾರ 14.5, ಚಿಕ್ಕಮಗಳೂರು 32 ಮಿ.ಮೀ. ಮಳೆ ದಾಖಲಾಗಿದೆ.
Related Articles
ಶಿವಮೊಗ್ಗ/ನರಗುಂದ: ಸಿಡಿಲಬ್ಬರದ ಮಳೆಗೆ ರಾಜ್ಯದಲ್ಲಿ ಮೂವರು ಅಸುನೀಗಿದ್ದಾರೆ. ಶಿವಮೊಗ್ಗ ತಾಲೂಕಿನ ಬಸವಾಪುರದಲ್ಲಿ ಸೋಮವಾರ ಮಧ್ಯಾಹ್ನ ಸಿಡಿಲು ಬಡಿದು ಸಣ್ಣತಿಮ್ಮಾಭೋಮಿ (55) ಎಂಬುವರು ಮೃತಪಟ್ಟಿದ್ದಾರೆ. ಇವರ ಜೊತೆಗಿದ್ದ ಗಾಂಧಿನಗರ ನಿವಾಸಿಗಳಾದ ಪರಮೇಶಿ, ಯೋಗೀಶ್ ಹಾಗೂ ನಾಗಪ್ಪ ಎಂಬುವರು ಗಾಯಗೊಂಡಿದ್ದಾರೆ. ಹಸು ಹಾಗೂ ಕುರಿಗಳನ್ನು
ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿಯಿತು. ಈ ಮಧ್ಯೆ, ನರಗುಂದದ ವರ್ತಿ ಹಳ್ಳದ ಬಳಿ ಭಾನುವಾರ ಸ್ಥಳೀಯ ಸೋಮಾಪೂರ ಓಣಿಯ ನಿವಾಸಿ ದೇವೇಂದ್ರಗೌಡ ರಾಜೇಂದ್ರಗೌಡ ಗೌಡ್ರ(64) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ.
Advertisement
ಹತ್ತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿಯಿತು. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮಂಗಲಗಿ ಗ್ರಾಪಂ ಮಾಜಿ ಅಧ್ಯಕ್ಷ ಸೂರ್ಯಕಾಂತ ರೇವಣಸಿದ್ದಪ್ಪ ಹೂಗಾರ (50) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇದೇ ವೇಳೆ, ಅವಿನಾಶ ಶಿವಪುತ್ರಪ್ಪ ಹೂಗಾರ(18) ಎಂಬುವರು ಗಾಯಗೊಂಡಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿಯಿತು.
ದಾವಣಗೆರೆ ಜಲಾವೃತದಾವಣಗೆರೆ: ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವ 3 ಗಂಟೆ ವರೆಗೆ ಸುರಿದ ಮಳೆಗೆ ನಗರದ ತಗ್ಗು
ಪ್ರದೇಶಗಳೆಲ್ಲಾ ಜಲಾವೃತಗೊಂಡಿದ್ದು, 1000ಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಎರಡು ಕಡೆಗಳಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದ್ದು, ಸಂತ್ರಸ್ತರಿಗೆ ನೆರವು ಒದಗಿಸಲಾಗಿದೆ.