ಕೋಲಾರ: ನೂತನವಾಗಿ ಆಯ್ಕೆ ಆಗಿರುವ ಗ್ರಾಪಂ ಸದಸ್ಯರಿಗೆ ಗ್ರಾಪಂ ಆಡಳಿತ ಕುರಿತು 2ನೇ ಬಾರಿಗೆ ಸಾಮರ್ಥ್ಯ ಬೆಳವಣಿಗೆಯ ತರಬೇತಿ ನೀಡಲಾಗು ತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ತಿಳಿಸಿದರು.
ತಾಪಂ ಸಾಮರ್ಥ್ಯ ಸೌಧದಲ್ಲಿ ನೂತನವಾಗಿ ಆಯ್ಕೆ ಯಾದ ಗ್ರಾಪಂ ಸದಸ್ಯರಿಗೆ 2ನೇ ಬಾರಿಗೆಹಮ್ಮಿ ಕೊಂಡಿದ್ದ ತರಬೇತಿ ಕಾರ್ಯಕ್ರಮ ಕುರಿತು ಅವರು ಮಾತನಾಡಿದರು.
ತರಬೇತಿಯಲ್ಲಿ ಯಾವ ರೀತಿ ಗ್ರಾಮಗಳನ್ನು ಅಭಿವೃದ್ಧಿ ಮಾಡಬೇಕು ಎಂಬ ವಿಷಯದ ಬಗ್ಗೆತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 90 ಸಾವಿರ ಚುನಾಯಿತ ಸದಸ್ಯರಿಗೆ 5ದಿನದ ತರಬೇತಿ ನೀಡಲಾಗುತ್ತಿದೆ. ಪ್ರತಿ ತಿಂಗಳು ಮೊದಲನೇ ಶನಿವಾರ ಮತ್ತು ಮೂರನೇ ಶನಿವಾರ ವರ್ಷಕ್ಕೆ 24 ಸಲ ಆನ್‌ಲೈನ್‌ನಲ್ಲಿ ತರಬೇತಿ ಕೊಡಲಾಗುತ್ತದೆ ಎಂದರು.ನರೇಗಾ ಯೋಜನೆಯಡಿಯಲ್ಲಿ ಒಂದು ಗ್ರಾ ಪಂಗೆ ಒಂದು ಮಳಿಗೆ ಕಟ್ಟಿಸಬಹುದು, ಮಹಿಳಾ ಸ್ವಸಹಾಯಕ ಗುಂಪಿಗೆ ಭವನ, ಗ್ರಂಥಾಲಯ, ಶಾಲೆಗಳಿಗೆ ಕಾಂಪೌಂಡ್ ಕಟ್ಟಿಸಬಹುದು. ಗ್ರಾಪಂ ಕೆಲವು ಕ್ಷೇತ್ರಗಳಿಗೆ ಸೀಮಿತವಾಗದೆ, ಎಲ್ಲಾ ರೀತಿಯ ಅಭಿ ವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.
ಅಂಗನವಾಡಿಗಳಿಗೆ ಭೇಟಿ ನೀಡಬೇಕು. ಅಲ್ಲಿನ ಗರ್ಭಿಣಿಯರಿಗೆ ಹಾಲಿನ ಪುಡಿ, ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆಯಾ ಎಂದು ವಿಚಾರಿಸಬೇಕು. ಕುಡಿಯುವ ನೀರು, ರಸ್ತೆ, ಚರಂಡಿ, ಆರೋಗ್ಯ,ನೈರ್ಮಲ್ಯ, ಮಕ್ಕಳ ಅಭಿವೃದ್ಧಿ ಇವುಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಜಿಪಂ ಸಿಇಒ ಎನ್.ಎಂ.ನಾಗರಾಜ್, ಜಿಪಂ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ, ತಾಪಂ ಇಒ ಬಾಬು ಸೇರಿದಂತೆ ಮತ್ತಿತರರು ಇದ್ದರು.