Advertisement
ಜವಾಬ್ದಾರಿಯುತ ಆಟ ಆಡುತ್ತಿರುವ ವಿರಾಟ್ ಕೊಹ್ಲಿ 85 ರನ್ ಮಾಡಿ ಬ್ಯಾಟಿಂಗ್ ಕಾದಿರಿಸಿಕೊಂಡಿ ದ್ದಾರೆ. ಇವರೊಂದಿಗೆ 11 ರನ್ ಗಳಿಸಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇದ್ದಾರೆ. ಸೋಮವಾರದ ಮೊದಲ ಅವಧಿಯ ಆಟ ಭಾರತದ ಪಾಲಿಗೆ ನಿರ್ಣಾಯಕ.
ಭಾರತದ ಆರಂಭ ಮತ್ತೂಮ್ಮೆ ನಿರೀಕ್ಷಿತ ಮಟ್ಟ ಮುಟ್ಟುವಲ್ಲಿ ಎಡವಿತು. ಶಿಖರ್ ಧವನ್ ಬದಲು ಆಡಲಿಳಿದ ಕೆ.ಎಲ್. ರಾಹುಲ್ ಈ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾದರು. ಕೇವಲ 10 ರನ್ ಮಾಡಿ ಮಾರ್ಕೆಲ್‌ಗೆ ರಿಟರ್ನ್ ಕ್ಯಾಚ್ ನೀಡಿದರು. “ಟೆಸ್ಟ್ ಸ್ಪೆಷಲಿಸ್ಟ್’ ಚೇತೇಶ್ವರ್ ಪೂಜಾರ ಮರು ಎಸೆತದಲ್ಲೇ ರನೌಟ್ ದೌರ್ಭಾಗ್ಯಕ್ಕೆ ಸಿಲುಕಿದರು. ಅಲ್ಲಿಗೆ 28 ರನ್ನಿಗೆ ಭಾರತದ 2 ವಿಕೆಟ್ ಹಾರಿ ಹೋಯಿತು.
Related Articles
Advertisement
ವಿರಾಟ್ ಕೊಹ್ಲಿ ತುಸು ಆಕ್ರಮಣಕಾರಿ ಮೂಡ್‌ನಲ್ಲಿದ್ದರು. 68 ಎಸೆತಗಳಲ್ಲಿ ಅವರ ಅರ್ಧ ಶತಕ ಪೂರ್ತಿಗೊಂಡಿತು. ಆದರೆ ರೋಹಿತ್ ಶರ್ಮ ಅವರಿಂದ ಕಪ್ತಾನನಿಗೆ ಯಾವುದೇ ಬೆಂಬಲ ಸಿಗಲಿಲ್ಲ. ರೋಹಿತ್ ಕೇವಲ 10 ರನ್ ಮಾಡಿ ಪೆವಿಲಿಯನ್ ಸೇರಿಕೊಂಡರು.
ಆಫ್ರಿಕಾ 335 ಆಲೌಟ್6ಕ್ಕೆ 269 ರನ್ ಮಾಡಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿದ ದಕ್ಷಿಣ ಆಫ್ರಿಕಾ, ಕಪ್ತಾನ ಡು ಪ್ಲೆಸಿಸ್ ಅವರ ಅರ್ಧ ಶತಕದ ನೆರವಿನಿಂದ 335ರ ತನಕ ಬೆಳೆಯಿತು. 24 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಡು ಪ್ಲೆಸಿಸ್ 63ರ ತನಕ ಬೆಳೆದರು. ಇವರ ವಿಕೆಟನ್ನು ಬೇಗ ಹಾರಿಸಿ ಆಫ್ರಿಕಾವನ್ನು ಮುನ್ನೂರರೊಳಗೆ ಹಿಡಿದು ನಿಲ್ಲಿಸುವ ಭಾರತದ ಯೋಜನೆ ಫಲಿಸಲಿಲ್ಲ. ಡು ಪ್ಲೆಸಿಸ್ 9ನೇ ವಿಕೆಟ್ ರೂಪದಲ್ಲಿ ಇಶಾಂತ್‌ಗೆ ಬೌಲ್ಡ್ ಆಗಿ ವಾಪಸಾಗುವಾಗ ಆಫ್ರಿಕಾ 333 ರನ್ ಮಾಡಿತ್ತು. 142 ಎಸೆತಗಳಿಗೆ ಜವಾಬಿತ್ತ ಹರಿಣಗಳ ನಾಯಕ, ಒಟ್ಟು 9 ಬೌಂಡರಿ ಹೊಡೆದರು. ಡು ಪ್ಲೆಸಿಸ್-ಕೇಶವ್ ಮಹಾರಾಜ್ ಜೋಡಿಯನ್ನು ಶಮಿ ಬೇರ್ಪಡಿಸಿದರು. ಮಹಾರಾಜ್ ಗಳಿಕೆ 18 ರನ್. ಬಳಿಕ ರಬಾಡ (11) ಅವರನ್ನು ಕೂಡಿಕೊಂಡ ಡು ಪ್ಲೆಸಿಸ್ 8ನೇ ವಿಕೆಟಿಗೆ 42 ರನ್ ಸೇರಿಸಿದರು. 6 ರನ್ ಮಾಡಿದ ಮಾರ್ಕೆಲ್ ವಿಕೆಟ್ ಕಿತ್ತ ಅಶ್ವಿನ್ ಆಫ್ರಿಕಾ ಇನ್ನಿಂಗ್ಸಿಗೆ ತೆರೆ ಎಳೆದರು. ಅಶ್ವಿನ್ 113ಕ್ಕೆ 4 ವಿಕೆಟ್ ಕಿತ್ತು ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿದರು. ಇಶಾಂತ್ ಶರ್ಮ ಬುಟ್ಟಿಗೆ 3 ವಿಕೆಟ್ ಬಿತ್ತು. ಶಮಿ ವಿಕೆಟ್ ಶತಕ
ರವಿವಾರದ ಆಟದಲ್ಲಿ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಮಹಾರಾಜ್ ಅವರನ್ನು ಔಟ್ ಮಾಡುವ ಮೂಲಕ ಶಮಿ ಈ ಹಿರಿಮೆಗೆ ಪಾತ್ರರಾದರು. ಶಮಿ “ವಿಕೆಟ್ ಶತಕ’ ಸಾಧನೆಗೈದ ಭಾರತದ 7ನೇ ವೇಗಿ. ಕಪಿಲ್, ಜಹೀರ್, ಜೆ. ಶ್ರೀನಾಥ್, ಇಶಾಂತ್, ಕರ್ಶನ್ ಘಾವ್ರಿ, ಇರ್ಫಾನ್ ಪಠಾಣ್ ಅವರೆಲ್ಲ ಭಾರತದ ಉಳಿದ ಸಾಧಕರು. ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್
(ಮೊದಲ ದಿನ: 6 ವಿಕೆಟಿಗೆ 269)
ಫಾ ಡು ಪ್ಲೆಸಿಸ್ ಬಿ ಇಶಾಂತ್ 63
ಕೇಶವ್ ಮಹಾರಾಜ್ ಸಿ ಪಟೇಲ್ ಬಿ ಶಮಿ 18
ಕಾಗಿಸೊ ರಬಾಡ ಸಿ ಪಾಂಡ್ಯ ಬಿ ಇಶಾಂತ್ 11
ಮಾರ್ನೆ ಮಾರ್ಕೆಲ್ ಸಿ ವಿಜಯ್ ಬಿ ಅಶ್ವಿನ್ 6
ಲುಂಗಿಸಾನಿ ಎನ್‌ಗಿಡಿ ಔಟಾಗದೆ 1
ಇತರ 9
ಒಟ್ಟು (ಆಲೌಟ್) 335
ವಿಕೆಟ್ ಪತನ: 7-282, 8-324, 9-333.
ಬೌಲಿಂಗ್:
ಜಸ್‌ಪ್ರೀತ್ ಬುಮ್ರಾ 22-6-60-0
ಮೊಹಮ್ಮದ್ ಶಮಿ 15-2-58-1
ಇಶಾಂತ್ ಶರ್ಮ 22-4-46-3
ಹಾರ್ದಿಕ್ ಪಾಂಡ್ಯ 16-4-50-0
ಆರ್. ಅಶ್ವಿನ್ 38.5-10-113-4
ಭಾರತ ಪ್ರಥಮ ಇನ್ನಿಂಗ್ಸ್
ಮುರಳಿ ವಿಜಯ್ ಸಿ ಡಿಕಾಕ್ ಬಿ ಮಹಾರಾಜ್ 46 ಕೆ.ಎಲ್. ರಾಹುಲ್ ಸಿ ಮತ್ತು ಬಿ ಮಾರ್ಕೆಲ್ 10
ಚೇತೇಶ್ವರ್ ಪೂಜಾರ ರನೌಟ್ 0
ವಿರಾಟ್ ಕೊಹ್ಲಿ ಬ್ಯಾಟಿಂಗ್ 85
ರೋಹಿತ್ ಶರ್ಮ ಎಲ್‌ಬಿಡಬ್ಲ್ಯು ರಬಾಡ 10
ಪಾರ್ಥಿವ್ ಪಟೇಲ್ ಸಿ ಡಿಕಾಕ್ ಬಿ ಎನ್‌ಗಿಡಿ 19
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ 11
ಇತರ 2
ಒಟ್ಟು (5 ವಿಕೆಟಿಗೆ) 183
ವಿಕೆಟ್ ಪತನ: 1-28, 2-28, 3-107, 4-132, 5-164.
ಬೌಲಿಂಗ್:
ಕೇಶವ್ ಮಹಾರಾಜ್ 16-1-53-1
ಮಾರ್ನೆ ಮಾರ್ಕೆಲ್ 15-3-47-1
ವೆರ್ನನ್ ಫಿಲಾಂಡರ್ 9-3-23-0
ಕಾಗಿಸೊ ರಬಾಡ 12-0-33-1
ಲುಂಗಿ ಎನ್‌ಗಿಡಿ 9-2-26-1