Advertisement

ದ್ವಿತೀಯ ಪಿಯು ಪರೀಕ್ಷಾ ಸಿದ್ಧತೆ ಪೂರ್ಣ

01:00 AM Mar 01, 2019 | Harsha Rao |

ಉಡುಪಿ: ಮಾ. 1ರಿಂದ 18ರ ವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳು ಸಿದ್ಧಗೊಂಡಿವೆ. 7,470 ಹುಡುಗಿಯರು ಮತ್ತು 7,940 ಹುಡುಗರ ಸಹಿತ ಒಟ್ಟು 15,410 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 

Advertisement

ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭ ಗೊಳ್ಳಲಿದ್ದು, ಅಪರಾಹ್ನ 1.30ರ ವರೆಗೆ ನಡೆಯಲಿದೆ. ಅಕ್ರಮ ಮತ್ತು ಪ್ರಶ್ನೆ ಪತ್ರಿಕೆಗಳ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಲಾ ವಿಭಾಗದಿಂದ 1,735, ವಾಣಿಜ್ಯ ವಿಭಾಗದಿಂದ 8,457, ವಿಜ್ಞಾನ ವಿಭಾಗದಿಂದ 5,218 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 

ಪ್ರಶ್ನೆ ಪತ್ರಿಕೆಗಳಿಗೆ ಭದ್ರತೆ
ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು 8 ರೂಟ್‌ ತಂಡಗಳನ್ನು ರಚಿಸಲಾಗಿದೆ. ಆಯಾ ಪರೀಕ್ಷಾ ದಿನಗಳಂದೇ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲಾಗುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವ ನಿಟ್ಟಿನಲ್ಲಿ ಜಿಪಿಎಸ್‌ ಕಣ್ಗಾವಲು, ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ. 

ಕೆಎಸ್ಸಾರ್ಟಿಸಿಯಲ್ಲಿ ಉಚಿತ ಪ್ರಯಾಣ
  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಹಾಲ್‌ಟಿಕೆಟ್‌ ತೋರಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರದ ವರೆಗೆ ಪ್ರಯಾಣಿಸಬಹುದು. ಈ ಸೇವೆ ಕೆಎಸ್ಸಾರ್ಟಿಸಿಯ ವೋಲ್ವೋ ಬಸ್‌ಗಳಲ್ಲಿ ಲಭ್ಯವಿಲ್ಲ.  

Advertisement

ಕಾಪು ತಾ|: 17 ಕಾಲೇಜುಗಳ ವಿದ್ಯಾರ್ಥಿಗಳು ಸಿದ್ಧ
ಕಾಪು: ನೂತನ ಕಾಪು ತಾಲೂಕಿನಲ್ಲಿ ಒಟ್ಟು 17 ಪದವಿಪೂರ್ವ ಕಾಲೇಜು ಗಳಿದ್ದು ಪಿಯುಸಿ ಪರೀಕ್ಷೆಗೆ ಕಾಪು ತಾ| ಸಿದ್ದಗೊಂಡಿದೆ. ಪದವಿಪೂರ್ವ ಕಾಲೇಜುಗಳ ಪೈಕಿ ಸರಕಾರಿ – 6, ಅನುದಾನಿತ – 6, ಅನುದಾನ ರಹಿತ – 
5 ಕಾಲೇಜುಗಳಿದ್ದು, ಸುಮಾರು 2,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಎಲ್ಲ ರೀತಿಯ ಸಿದ್ಧತೆ 
ದ್ವಿತೀಯ ಪಿಯುಸಿ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ವಿದ್ಯಾರ್ಥಿಗಳು ಆತಂಕಪಟ್ಟುಕೊಳ್ಳದೆ  ಪರೀಕ್ಷೆ ಎದುರಿಸಿ. ಏನಾದರೂ ಸಂದೇಹಗಳಿದ್ದರೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ.  
-ಸುಬ್ರಹ್ಮಣ್ಯ ಜೋಷಿ,    ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next