Advertisement

ಇಂದು ಭಾರತ-ಇಂಡೀಸ್‌ 2ನೇ ಏಕದಿನ; ಭಾರತವೇ ಸಮತೋಲಿತ ತಂಡ

03:45 AM Jun 25, 2017 | Team Udayavani |

ಪೋರ್ಟ್‌ ಆಫ್ ಸ್ಪೇನ್‌: ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಮೊದಲನೇ ಪಂದ್ಯ ಮಳೆಯಿಂದ ರದ್ದಾಗಿದೆ. 2ನೇ ಮುಖಾಮುಖೀ ಭಾನುವಾರ ನಡೆಯಲಿದೆ.

Advertisement

ಮೊದಲನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 39.2 ಓವರ್‌ಗೆ 3 ವಿಕೆಟ್‌ ಕಳೆದುಕೊಂಡು 199 ರನ್‌ ಬಾರಿಸಿತ್ತು. ಈ ಹಂತದಲ್ಲಿ ಸುರಿದ ಮಳೆ ಆನಂತರ ನಿಲ್ಲಲೇ ಇಲ್ಲ. ಹೀಗಾಗಿ ಪಂದ್ಯ ರದ್ದಾಗಿದೆ. ಇನ್ನೂ ಉಳಿದಿರುವುದು 4 ಪಂದ್ಯಗಳು ಮಾತ್ರ.

ಭಾರತವೇ ಬಲಿಷ್ಠ: ತಂಡಗಳ ಸಾಮರ್ಥ್ಯವನ್ನು ಹೋಲಿಕೆ ಮಾಡಿ ನೋಡಿದರೆ ಆತಿಥೇಯ ವೆಸ್ಟ್‌ ಇಂಡೀಸ್‌ಗಿಂತ ಭಾರತವೇ ಬಲಿಷ್ಠವಾಗಿದೆ. ವಿಶ್ವ ಶ್ರೇಷ್ಠ ಆಟಗಾರರು ಭಾರತ ತಂಡದಲ್ಲಿದ್ದಾರೆ. ಆರಂಭಿಕರಾಗಿ ಅಜಿಂಕ್ಯ ರಹಾನೆ, ಶಿಖರ್‌ ಧವನ್‌ ಉತ್ತಮ ಆರಂಭ ಒದಗಿಸಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್‌ ಕೊಹ್ಲಿ, ಎಂ.ಎಸ್‌.ಧೋನಿ, ಯುವರಾಜ್‌ ಸಿಂಗ್‌ ಬಿರುಸಿನ ಬ್ಯಾಟಿಂಗ್‌ ನಡೆಸಬಲ್ಲರು. ಆದರೆ ಕಳೆದ ಪಂದ್ಯದಲ್ಲಿ ಯುವರಾಜ್‌ ಸಿಂಗ್‌ ವೈಫ‌ಲ್ಯ ಎದುರಿಸಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ವೇಗಿಗಳಾದ ಭುವನೇಶ್ವರ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ, ಉಮೇಶ್‌ ಯಾದವ್‌ ಭರ್ಜರಿ ದಾಳಿ ನಡೆಸಬಲ್ಲರು. ಸ್ಪಿನ್ನರ್‌ಗಳಾಗಿ ರವೀಂದ್ರ ಜಡೇಜ, ಅರೆ ಕಾಲಿಕ ಸ್ಪಿನ್ನರ್‌ಗಳಾದ ಕೇದಾರ್‌ ಜಾಧವ್‌, ಯುವರಾಜ್‌ ಸಿಂಗ್‌ ಮಿಂಚಬಲ್ಲರು.

ಕ್ಲಬ್‌ ತಂಡದಂತಿರುವ ವೆಸ್ಟ್‌ ಇಂಡೀಸ್‌:
ಮಂಡಳಿ ಮತ್ತು ಆಟಗಾರರ ನಡುವಿನ ಬಿಕ್ಕಟ್ಟಿನಿಂದಾಗಿ ಸ್ಟಾರ್‌ ಆಟಗಾರರು ಯಾರೂ ಕೂಡ ರಾಷ್ಟ್ರೀಯ ತಂಡದಲ್ಲಿ ಆಡುತ್ತಿಲ್ಲ. ಹೀಗಾಗಿ ಇದು ವೆಸ್ಟ್‌ ಇಂಡೀಸ್‌ಗೆ ದೊಡ್ಡ ತಲೆನೋವಾಗಿದೆ. ಇರುವುದರಲ್ಲಿ ನಾಯಕ ಜಾಸನ್‌ ಹೋಲ್ಡರ್‌, ರೋಸ್ಟನ್‌ ಚೇಸ್‌ ಉತ್ತಮವಾಗಿ ಆಡಬಲ್ಲರು. ಆದರೆ ಭಾರತೀಯ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಕಾಣಿಸುತ್ತಿಲ್ಲ. ಬೌಲಿಂಗ್‌ನಲ್ಲಿ ದೇವೇಂದ್ರ ಬಿಶೋ, ಮಿಗ್ಯುಯೆಲ್‌ ಕಮಿನ್ಸ್‌ ಇರುವುದರಲ್ಲಿ ಅಡ್ಡಿಯಿಲ್ಲ.

Advertisement

ಸಂಭಾವ್ಯ ತಂಡಗಳು
ಭಾರತ:
ಅಜಿಂಕ್ಯ ರಹಾನೆ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಯುವರಾಜ್‌ ಸಿಂಗ್‌, ಎಂ.ಎಸ್‌. ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಆರ್‌. ಅಶ್ವಿ‌ನ್‌, ಕುಲದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌.

ವೆಸ್ಟ್‌ ಇಂಡೀಸ್‌: ಎವಿನ್‌ ಲೆವಿಸ್‌, ಕೈರನ್‌ ಪೊವೆಲ್‌, ಶೈ ಹೋಪ್‌, ಜಾಸನ್‌ ಮೊಹಮ್ಮದ್‌, ರೋಸ್ಟನ್‌ ಚೇಸ್‌, ಜೊನಾಥನ್‌ ಕಾರ್ಟರ್‌, ಜಾಸನ್‌ ಹೋಲ್ಡರ್‌ (ನಾಯಕ), ಆ್ಯಶೆÉ ನರ್ಸ್‌, ದೇವೇಂದ್ರ ಬಿಶೂ, ಅಲ್ಜಾರಿ ಜೋಸೆಫ್, ಮಿಗ್ಯುಯೆಲ್‌ ಕಮಿನ್ಸ್‌.

ಸ್ಥಳ: ಪೋರ್ಟ್‌ ಆಫ್ ಸ್ಪೇನ್‌
ಆರಂಭ: ಸಂಜೆ 6.30
ನೇರ ಪ್ರಸಾರ: ಸೋನಿ ಸಿಕ್ಸ್‌

Advertisement

Udayavani is now on Telegram. Click here to join our channel and stay updated with the latest news.

Next