Advertisement

Tourism: ನವಮಂಗಳೂರಿಗೆ 2ನೇ ಪ್ರವಾಸಿ ಹಡಗು

12:36 AM Dec 15, 2023 | Team Udayavani |

ಪಣಂಬೂರು: ಐಷಾರಾಮಿ ಎಂಎಸ್‌ ಬೊಲೆಟ್ಟೆ 2ನೇ ಪ್ರವಾಸಿ ಹಡಗು ಗುರುವಾರ ನವಮಂಗಳೂರು ಬಂದರಿಗೆ ಆಗಮಿಸಿತು. ಬಹಾಮಾಸ್‌ಧ್ವಜ ಹೊಂದಿದ್ದು 704 ಪ್ರಯಾಣಿಕರು ಮತ್ತು 645 ಸಿಬಂದಿಯನ್ನು ಈ ಹಡಗು ಹೊಂದಿದೆ. 238 ಮೀಟರ್‌ ಉದ್ದವಿರುವ ಈ ಹಡಗು 62,732 ಟನ್‌ ಭಾರ, ಮತ್ತು 8.1 ಮೀಟರ್‌ ಆಳವಿದೆ.

Advertisement

ಕಾರ್ಕಳದ ಬಸದಿಗಳು, ಮೂಡುಬಿದಿರೆಯ ಸಾವಿರ ಕಂಬಗಳ ಬಸದಿ, ಸೋನ್ಸ್‌ ಫಾರ್ಮ್, ಗೋಡಂಬಿ ಕಾರ್ಖಾನೆ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಸೈಂಟ್‌ ಅಲೋಶಿಯಸ್‌ ಚಾಪೆಲ್‌ ಮತ್ತು ಸ್ಥಳೀಯ ಮಾರುಕಟ್ಟೆಯಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು.ಬಳಿಕ ಹಡಗು ಕೊಚ್ಚಿ ಬಂದರಿಗೆ ಪ್ರಯಾಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next