Advertisement

ವಿಜ್ಞಾನ ಪರೀಕ್ಷೆಗೆ 28 ಸಾವಿರ ವಿದ್ಯಾರ್ಥಿಗಳು ಗೈರು

12:33 PM Apr 03, 2018 | Team Udayavani |

ಬೆಂಗಳೂರು: ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆಗೆ ನೋಂದಣಿಯಾಗಿದ್ದ 8 ಲಕ್ಷ ವಿದ್ಯಾರ್ಥಿಗಳ ಪೈಕಿ 28,150 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ವಿಜ್ಞಾನ ಪರೀಕ್ಷೆಗೆ 8,01,715 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 7,73,565 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

Advertisement

ಉಳಿದಂತೆ ಮಂಡ್ಯದಲ್ಲಿ 2 ಮತ್ತು ಕೊಪ್ಪಳದಲ್ಲಿ ಒಬ್ಬ ವಿದ್ಯಾರ್ಥಿ ಸೇರಿ ಮೂವರನ್ನು ಪರೀಕ್ಷಾ ಅಕ್ರಮದಡಿ ಡಿಬಾರ್‌ ಮಾಡಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ. ಏ.4ರಂದು ತೃತೀಯ ಭಾಷೆಯ ವಿಷಯಗಳಾದ ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಉರ್ದು, ಸಂಸ್ಕೃತ, ಕೊಂಕಣಿ ಮತ್ತು ತುಳು ಪರೀಕ್ಷೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next