Advertisement

Pradhan Mantri ಜನೌಷಧದಿಂದ ಜನರಿಗೆ 28,000 ಕೋ. ಉಳಿಕೆ: ನಡ್ಡಾ

01:02 AM Aug 03, 2024 | Team Udayavani |

ಹೊಸದಿಲ್ಲಿ: ಜನೌಷಧ ಕೇಂದ್ರದಿಂದ ದೇಶಾದ್ಯಂತ ರೋಗಿಗಳಿಗೆ 28 ಸಾವಿರ ಕೋಟಿ ರೂ. ಉಳಿತಾಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಪ್ರಧಾನ ಮಂತ್ರಿ ಜನೌಷಧ ಕೇಂದ್ರವು 1,965 ಔಷಧಗಳನ್ನು, 235 ಆರೋಗ್ಯ ಸಂಬಂಧಿ ಉಪಕರಣಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ಔಷಧಗಳು ಶೇ.52 ರಿಂದ ಶೇ.80ರಷ್ಟು ಕಡಿಮೆ ಮೊತ್ತಕ್ಕೆ ದೊರೆಯುತ್ತಿದ್ದು, ಜನರ ಹಣ ಉಳಿತಾಯಕ್ಕೆ ಸಹಕಾರಿಯಾಗಿದೆ. 2015ರಲ್ಲಿ ಆರಂಭವಾದ ಈ ಯೋಜನೆ ಮೂಲಕ ಕಡಿಮೆ ದರದಲ್ಲಿ ಔಷಧ ಸಿಗುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next