Advertisement
ಗ್ರಾಮಗಳ ವಿಂಗಡನೆಯ ಲೆಕ್ಕಾಚಾರಉಡುಪಿ ಜಿಲ್ಲೆಯ ಬೈಂದೂರು, ಬ್ರಹ್ಮಾವರ, ಕಾಪು ಹಾಗೂ ಹೆಬ್ರಿ ತಾಲೂಕುಗಳ ಘೋಷಣೆಯಾಗಿದ್ದು 2018ರ ಜನವರಿಯಿಂದ ಅವುಗಳು ಕಾರ್ಯಾರಂಭಗೊಂಡಿವೆ. ಹೊಸ ತಾಲೂಕುಗಳ ರಚನೆಯಾದೊಡನೆ ಇಲಾಖೆ ಗಳು ಏಕಾಏಕಿ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯವಾಗಿದ್ದು ಸಂಪೂರ್ಣ ತಯಾರಿಗೆ ಇನ್ನಷ್ಟು ಕಾಲಾವಕಾಶ ಅನಿವಾರ್ಯ.
Related Articles
ಹೊಸ ತಾಲೂಕಿಗೆ ಸೇರ್ಪಡೆಗೊಳ್ಳುವ ಗ್ರಾಮಗಳ ಬಗ್ಗೆ ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು ದೂರ ವ್ಯಾಪ್ತಿಯ ನೆಲೆಯಲ್ಲಿ ಸಮೀಪದ ತಾಲೂಕುಗಳಲ್ಲಿ ಗ್ರಾಮಗಳನ್ನು ಸೇರ್ಪಡೆಗೊಳಿಸಬೇಕೆಂಬ ಬೇಡಿಕೆ ಹಾಗೂ ಒತ್ತಡ ಜನಪ್ರತಿನಿಧಿಗಳಿಗೆ ನುಂಗಲಾರದ ತುತ್ತಾಗಿದೆ.
Advertisement
ವಂಡ್ಸೆ ಗ್ರಾಮದಲ್ಲಿ ಹರ್ಷಾಚರಣೆ ವಂಡ್ಸೆ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲಿ ಉಳಿಸಿರುವ ಬಗ್ಗೆ ಆ ಭಾಗದ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 2017ರ ಡಿಸೆಂಬರ್‌ನಲ್ಲಿ ಸರಕಾರದ ಅಧಿಸೂಚನೆ ಹೊರಬಂದಿದ್ದು ಅದಕ್ಕೆ ಆಕ್ಷೇಪಣೆ ಸಲ್ಲಿಸಲು 1 ತಿಂಗಳ ಅವಕಾಶವನ್ನು ಕಲ್ಪಿಸಲಾಗಿದ್ದು ಸರಕಾರದ ಬೆಂಗಳೂರಿನ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ವಂಡ್ಸೆ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲೇ ಉಳಿಸಿರುವುದು ಇಲ್ಲಿನ ನಿವಾಸಿಗಳಿಗೆ ಸುತ್ತಿ ಬಳಸಿ ಬೈಂದೂರುಗೆ ತೆರಳಬೇಕಾದ ವಿದ್ಯಮಾನದಿಂದ ಮುಕ್ತಿ ದೊರೆತಂತಾಗಿದೆ.
– ಉದಯ ಕುಮಾರ್ ಶೆಟ್ಟಿ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಸೇನಾಪುರ ಹಾಗೂ ಕಮಲಶಿಲೆಯನ್ನು ಕುಂದಾಪುರ ತಾಲೂಕಿನಲ್ಲಿ ಉಳಿಸಬೇಕು. ಇಲ್ಲಿನ ನಿವಾಸಿಗಳಿಗೆ ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸಿರುವುದು ನಿರಾಶೆಯನ್ನುಂಟು ಮಾಡಿದ್ದು ಸುತ್ತಿ ಬಳಸಿ ಸರಕಾರಿ ಇಲಾಖೆಯ ಕಾರ್ಯಕ್ಕಾಗಿ ಬೈಂದೂರಿಗೆ ಸಾಗುವುದು ಕಷ್ಟಸಾಧ್ಯ. ಹಾಗೂ ಸಮಯ ವ್ಯರ್ಥ. ಬದಲಾಗಿ ಈ ಎರಡು ಗ್ರಾಮಗಳನ್ನು ಕುಂದಾಪುರ ತಾಲೂಕಿನಲ್ಲಿ ಉಳಿಸುವುದು ಸೂಕ್ತ.
– ರವೀಂದ್ರ ನಾವಡ ಸೇನಾಪುರ – ಡಾ| ಸುಧಾಕರ ನಂಬಿಯಾರ್