Advertisement
ಜಿಲ್ಲೆಯಲ್ಲಿ ಇದುವರೆಗೆ 19773 ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಅದರಲ್ಲಿ 1390 ವರದಿ ಪಾಸಿಟಿವ್ ಆಗಿದೆ. 15756 ವರದಿಗಳು ನೆಗೆಟವ್ ಬಂದಿದ್ದು, ಗಮನಾರ್ಹವಾದ ವಿಷಯವೆಂದರೆ ಇನ್ನೂ 2627 ವರದಿಗಳ ಫಲಿತಾಂಶ ಬಾಕಿಇದೆ.
Related Articles
Advertisement
ಜಿಲ್ಲೆಯಲ್ಲಿ ಯಾರಿಗಾದರೂ ರೋಗ ಲಕ್ಷಣಗಳಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿ. ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ. ಇಲ್ಲವಾದರೆ ನಾವೇ ಭೇಟಿ ನೀಡಿ ನಿಮ್ಮ ಸ್ವಾಬ್ ಟೆಸ್ಟ್ ಮಾಡಿಸುತ್ತೇವೆ ಎಂದು ಹೇಳಿದರು.
ನಾಗರಿಕರಿಗೆ ಯಾವುದೇ ಆತಂಕ ಬೇಡ. ಗಂಟಲು ದ್ರವ ಪರೀಕ್ಷೆಯನ್ನು ಉಚಿತವಾಗಿ ಮಾಡಿಸಲಾಗುತ್ತದೆ. ಕೋವಿಡ್ ಪಾಸಿಟಿವ್ ಕಂಡುಬಂದರೆ ಅವರ ಚಿಕಿತ್ಸೆಯನ್ನೂ ಉಚಿತವಾಗಿ ಮಾಡಲಾಗುತ್ತದೆ. ರೋಗ ಲಕ್ಷಣವಿದ್ದರೆ ಯಾವುದೇ ಹಿಂಜರಿಕೆಯಿಲ್ಲದೆ ಪರೀಕ್ಷೆ ಮಾಡಿಸಿ. ಜೀವ ರಕ್ಷಣೆಯೇ ನಮ್ಮ ಆದ್ಯತೆ ಎಂದು ಜಿಲ್ಲಾಧಿಕಾರಿಗಳು ನಾಗರಿಕರಿಗೆ ಮನವಿ ಮಾಡಿದರು.