Advertisement

G20 Summit ; 28 ಅಡಿ ಎತ್ತರದ ‘ನಟರಾಜ’ ಪ್ರತಿಮೆ ಆಕರ್ಷಣೆಯ ಕೇಂದ್ರ ಬಿಂದು

05:00 PM Sep 02, 2023 | Team Udayavani |

ಹೊಸದಿಲ್ಲಿ: ಇಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಸ್ಥಳದಲ್ಲಿ ಸ್ಥಾಪಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ‘ನಟರಾಜ’ನ ಪ್ರತಿಮೆಯು ಆಕರ್ಷಣೆಯ ಕೇಂದ್ರ ಬಿಂದುವಾಗಿ ಬೃಹತ್ ಜನಸಮೂಹವನ್ನು ಸೆಳೆಯುವ ನಿರೀಕ್ಷೆಯಿದೆ.

Advertisement

ಪೀಠ ಸೇರಿದಂತೆ 28 ಅಡಿ ಎತ್ತರದ ಈ ಪ್ರತಿಮೆಯನ್ನು ಪ್ರಾಚೀನ ಚೋಳರ ಕಂಚಿನ ತಯಾರಿಕೆಗೆ ಬಳಸಲಾಗಿದ್ದ ಲೋಹ ಎರಕದ ಪ್ರಾಚೀನ ಲಾಸ್ಟ್-ವ್ಯಾಕ್ಸ್ ತಂತ್ರವನ್ನು ಬಳಸಿ ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

“ಜಿ 20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9-10 ರವರೆಗೆ ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರವಾದ ‘ಭಾರತ್ ಮಂಟಪ’ದಲ್ಲಿ ನಡೆಯಲಿದ್ದು, ಕ್ಯಾಂಪಸ್‌ನಲ್ಲಿ ನಟರಾಜನ ಅತ್ಯಂತ ಎತ್ತರದ ಪ್ರತಿಮೆಯನ್ನು ಸ್ಥಾಪಿಸುತ್ತಿದ್ದೇವೆ” ಎಂದು ಮೂಲವೊಂದು ತಿಳಿಸಿದೆ.

ಪ್ರಗತಿ ಮೈದಾನಕ್ಕೆ ಎದುರಾಗಿರುವ ಮಥುರಾ ರಸ್ತೆಯನ್ನು ವಿಷಯಾಧಾರಿತ ಪೋಸ್ಟರ್‌ಗಳು, ಕಲಾತ್ಮಕ ಲೋಗೊಗಳು ಮತ್ತು G20 ಸದಸ್ಯ ರಾಷ್ಟ್ರಗಳ ಧ್ವಜಗಳಿಂದ ಅಲಂಕರಿಸಲಾಗಿದೆ.ಶೃಂಗಸಭೆಯ ಆರಂಭಿಕ ದಿನದಂದು, ಸಂಸ್ಕೃತಿ ಸಚಿವಾಲಯವು ರೂಪಿಸಿರುವ ‘ಸಂಸ್ಕೃತಿ ಕಾರಿಡಾರ್’ ಅನ್ನು ಭಾರತ ಮಂಟಪದಲ್ಲಿ ಅನಾವರಣಗೊಳಿಸಲಾಗುತ್ತದೆ.

‘ಸಂಸ್ಕೃತಿ ಕಾರಿಡಾರ್’ ಪರಿಕಲ್ಪನೆಯು ಎಲ್ಲಾ 29 ದೇಶಗಳಿಂದ “ಉತ್ತಮ ಮತ್ತು ಅತ್ಯಮೂಲ್ಯವಾದ ಕಲಾಕೃತಿಗಳನ್ನು ಒಂದೇ ಜಾಗದಲ್ಲಿ ತರುವುದಾಗಿದ್ದು ಅದು ಜಿ 20 ನ ವಿಷಯವಾದ ವಸುಧೈವ ಕುಟುಂಬಕಂನ ಸಾರವನ್ನು ಸೂಚಿಸುತ್ತದೆ. ಕಾರಿಡಾರ್ ಸಂಸ್ಕೃತಿಯು ಎಲ್ಲರನ್ನು ಒಂದುಗೂಡಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next