Advertisement
ಜೂನ್‌ವರೆಗೆ ಬಹುತೇಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಾಧ್ಯತೆ ಕಡಿಮೆಯಿದ್ದು, ವಿಧಾನಪರಿಷತ್‌ನ 12 ಸ್ಥಾನಗಳು ಜೂನ್ ಅಂತ್ಯಕ್ಕೆ ತೆರವಾಗಲಿದ್ದು ಆ ನಂತರ ಸಂಪುಟ ಪುನಾರಚನೆ ಆಗಬಹುದು ಎಂದು ಹೇಳಲಾಗಿದೆ.
Related Articles
Advertisement
ಕುಮಟಳ್ಳಿಗೆ ಸಚಿವ ಸ್ಥಾನ ಏಕಿಲ್ಲ?ವಿಜಯಪುರ: ಬಿಜೆಪಿ ಅ ಧಿಕಾರಕ್ಕೆ ತರಲು ಶಾಸಕ ಸ್ಥಾನ ತ್ಯಾಗ ಮಾಡಿ, ಮತ್ತೆ ಗೆದ್ದಿರುವ ಎಲ್ಲ ಅರ್ಹ ಶಾಸಕರಲ್ಲಿ ಮಹೇಶ ಕುಮಟಳ್ಳಿ ಹೊರತಾಗಿ ಎಲ್ಲರನ್ನೂ ಮಂತ್ರಿ ಮಾಡಲಾಗಿದೆ. ಕುಮಟಳ್ಳಿ ಅವರನ್ನು ಕಡೆಗಣಿಸಿದ್ದು ಏಕೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶ್ನಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇದರಿಂದ ತಪ್ಪು ಸಂದೇಶ ರವಾನೆ ಆಗಲಿದೆ ಎಂದಿದ್ದಾರೆ. ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಸಂಪುಟ ವಿಸ್ತರಣೆ ಬಳಿಕ ಪ್ರಾದೇಶಿಕ ಅಸಮಾನತೆ ಕಾರಣವಾಗಿದೆ. ಈಗಾಗಲೇ ಬೆಂಗಳೂರು, ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಮತ್ತೆ ಕೆಲವರಿಗೆ ನೂರಕ್ಕೆ ನೂರರಷ್ಟು ಮಂತ್ರಿ ಮಾಡುವ ಭರವಸೆ ನೀಡಲಾಗುತ್ತಿದೆ. ಮತ್ತೂಂದೆಡೆ ತ್ಯಾಗ ಮಾಡಿದ ಶಾಸಕ ಕುಮಟಳ್ಳಿ ಅವರನ್ನು ಕಡೆಗಣಿಸಲಾಗಿದೆ. ಮುಂಬೈ ಕರ್ನಾಟಕದ ವಿಜಯಪುರ ಜಿಲ್ಲೆ, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಯ ಶಾಸಕರನ್ನು ಕಡೆಗಣಿಸಲಾಗಿದೆ ಎಂದರು. ಇದರಿಂದಾಗಿ ಪ್ರಾದೇಶಿಕ ಅಸಮಾನತೆ ಹೆಚ್ಚಿದೆ. ಕೆಲವು ಶಾಸಕರು ಈ ಕುರಿತು ನನ್ನೊಂದಿಗೆ ಮಾತನಾಡಿದ್ದಾರೆ. ಇಂಥ ಸ್ಥಿತಿಯಲ್ಲಿ ಬೆಳಗಾವಿ ಜಿಲ್ಲೆಯ ಮತ್ತೂಬ್ಬ ಶಾಸಕರನ್ನು ನೂರಕ್ಕೆ ನೂರರಷ್ಟು ಮಂತ್ರಿ ಮಾಡುವ ಭರವಸೆ ನೀಡುವುದು ಎಷ್ಟು ಸರಿಯಲ್ಲ. ಹೀಗಾಗಿ ಶಾಸಕಾಂಗ ಸಭೆ ಕರೆದು ಶಾಸಕರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿ. ಬಜೆಟ್ ಪೂರ್ವದಲ್ಲೇ ಶಾಸಕಾಂಗ ಸಭೆ ಕರೆಯಬೇಕು ಎಂದು ಪತ್ರಬರೆದಿದ್ದೇನೆ ಎಂದರು. ನೂತನ ಸಚಿವರಿಗೆ ಹಂಚಿಕೆಯಾದ ಖಾತೆ
ರಮೇಶ್ ಜಾರಕಿಹೊಳಿ- ಜಲ ಸಂಪನ್ಮೂಲ
ಎಸ್.ಟಿ. ಸೋಮಶೇಖರ್- ಸಹಕಾರ
ಬೈರತಿ ಬಸವರಾಜು- ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ ಹೊರತುಪಡಿಸಿ)
ಕೆ.ಗೋಪಾಲಯ್ಯ- ಸಣ್ಣ ಕೈಗಾರಿಕೆ ಮತ್ತು ಸಕ್ಕರೆ
ಶಿವರಾಮ ಹೆಬ್ಬಾರ್- ಕಾರ್ಮಿಕ
ಡಾ.ಕೆ. ಸುಧಾಕರ್- ವೈದ್ಯಕೀಯ ಶಿಕ್ಷಣ
ಆನಂದ್ ಸಿಂಗ್- ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ
ಬಿ.ಸಿ.ಪಾಟೀಲ್- ಅರಣ್ಯ
ಕೆ.ಸಿ.ನಾರಾಯಣಗೌಡ- ಪೌರಾಡಳಿತ, (ಹೆಚ್ಚುವರಿಯಾಗಿ ತೋಟಗಾರಿಕೆ, ರೇಷ್ಮೆ)
ಶ್ರೀಮಂತ ಪಾಟೀಲ್- ಜವಳಿ ಹೆಚ್ಚುವರಿ ಖಾತೆಗಳು
ಗೋವಿಂದ ಕಾರಜೋಳ- ಸಮಾಜ ಕಲ್ಯಾಣ
ಡಾ.ಸಿ.ಎನ್.ಅಶ್ವತ್ಥ ನಾರಾಯಣ- ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ
ಜಗದೀಶ ಶೆಟ್ಟರ್- ಸಾರ್ವಜನಿಕ ಉದ್ದಿಮೆ
ಬಿ.ಶ್ರೀರಾಮುಲು- ಹಿಂದುಳಿದ ವರ್ಗಗಳ ಕಲ್ಯಾಣ
ಸಿ.ಟಿ.ರವಿ- ಯುವಜನ ಸಬಲೀಕರಣ ಮತ್ತು ಕ್ರೀಡೆ
ಪ್ರಭು ಚೌಹಾಣ್- ಅಲ್ಪಸಂಖ್ಯಾತರ ಕಲ್ಯಾಣ, ಹಜ್, ವಕ್ಫ್ ಬಿಎಸ್‌ವೈ ಬಳಿಯಿರುವ ಖಾತೆಗಳು: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ, ಗುಪ್ತಚರ, ಯೋಜನೆ, ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಖಾತೆ ಸೇರಿದಂತೆ ಹಂಚಿಕೆಯಾಗದ ಖಾತೆಗಳು