Advertisement

28 BJP ನಾಯಕರು ಮೋಹನ್ ಯಾದವ್ ಸಂಪುಟಕ್ಕೆ ಸೇರ್ಪಡೆ

05:27 PM Dec 25, 2023 | Team Udayavani |

ಭೋಪಾಲ್ : ಮಧ್ಯಪ್ರದೇಶ ಸಚಿವ ಸಂಪುಟವನ್ನು ಸೋಮವಾರ (ಡಿ.25) ವಿಸ್ತರಣೆ ಮಾಡಲಾಗಿದ್ದು, ಒಟ್ಟು 28 ಬಿಜೆಪಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದಲ್ಲಿ ಮೊದಲ ಸಂಪುಟ ವಿಸ್ತರಣೆ ನಡೆದಿದ್ದು, ಹಿರಿಯ ಬಿಜೆಪಿ ನಾಯಕರಾದ ಪ್ರದ್ಯುಮನ್ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್, ಕೈಲಾಶ್ ವಿಜಯವರ್ಗಿಯಾ ಮತ್ತು ವಿಶ್ವಾಸ್ ಸಾರಂಗ್ ಸೇರಿದಂತೆ 18 ನಾಯಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 6 ನಾಯಕರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಮತ್ತು 4 ನಾಯಕರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು ನಿರ್ಮಲಾ ಭೂರಿಯಾ ಅವರಿಗೆ ಕ್ಯಾಬಿನೆಟ್ ಮಂತ್ರಿ , ಪ್ರತಿಮಾ ಬಗ್ರಿ ಅವರಿಗೆ ರಾಜ್ಯಖಾತೆ ಸಚಿವೆಯನ್ನಾಗಿ ಮಾಡಲಾಗಿದೆ.

“ಎಲ್ಲಾ ಹೊಸ ಸಚಿವರನ್ನು ನಾನು ಅಭಿನಂದಿಸುತ್ತೇನೆ. ಹೊಸ ಕ್ಯಾಬಿನೆಟ್ ಹೊಸ ದಾಖಲೆಗಳನ್ನು ಮಾಡಲಿದೆ.” ಎಂದು ಸಿಎಂ ಮೋಹನ್ ಯಾದವ್ ಹೇಳಿದರು.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಸಚಿವ ಕೈಲಾಶ್ ವಿಜಯವರ್ಗಿಯಾ, “ಈ ತಂಡವು ಟೆಸ್ಟ್ ಆಟಗಾರರು ಮತ್ತು ಟಿ 20 ಆಟಗಾರರನ್ನು ಹೊಂದಿದೆ ಮತ್ತು ಆದ್ದರಿಂದ ಇದು ಅತ್ಯಂತ ಸಮತೋಲಿತ ತಂಡವಾಗಿದೆ” ಎಂದು ಹೇಳಿದ್ದಾರೆ.

Advertisement

ಈಗಾಗಲೇ ಯಾದವ್ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದು, ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದೇವ್ಡಾ ಅವರೊಂದಿಗೆ ಸಂಪುಟ ಸದಸ್ಯರ ಸಂಖ್ಯೆ 31ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next