ಮಣಿಪಾಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಿಂತಕರ ಚಾವಡಿಯೆನಿಸಿಕೊಂಡ ವಿಧಾನಪರಿಷತ್ ರದ್ದುಗೊಳಿಸುವ ಕ್ರಮ ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಪ್ರಶಾಂತ್ ಜೆ ಎಸ್: ಇತ್ತೀಚಿನ ವರ್ಷಗಳಲ್ಲಿ ಪರಿಷತ್ ಅನ್ನೋದು ಚಿಂತಕರ ಚಾವಡಿ ಆಗಿರದೆ ಶ್ರೀಮಂತರ ಚಾವಡಿ ಆಗತಿದೆ.ಹೀಗಾದರೆ ಅದು ಇಲ್ಲದೇ ಇರುವದೇ ಒಳ್ಳೆಯದು.
ಚಿ. ಮ. ವಿನೋದ್ ಕುಮಾರ್: ವಿಧಾನ ಪರಿಷತ್ತು ಈಗ ಚಿಂತಕರ ಚಾವಡಿಯಲ್ಲ ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೆ ಅಥವಾ ಟಿಕೇಟ್ ಸಿಗದಿದ್ದಂತಹ ಪ್ರಮುಖರಿಗೆ ಅಧಿಕಾರವನ್ನು ಅನುಭವಿಸಲು ಸುಲಭವಾಗಿ ಅವಕಾಶ ಸಿಗುವ ವೇದಿಕೆಯಾಗಿದೆ.ಅದರಿಂದ ರಾಜ್ಯದ ಬೊಕ್ಕಸಕ್ಕೆ ಸುಮ್ಮನೆ ಅರ್ಥಿಕವಾಗಿ ಹೊರೆ ಜಾಸ್ತಿ.
ದಯಾನಂದ್ ಕೊಯಿಲಾ: ವಿಧಾನ ಪರಿಷತ್ ಗೆ ಯಾರಾದ್ರೂ ಯಾವಾಗ್ಲಾದ್ರೂ ಸಮರ್ಥ ಚಿಂತಕ ರ ಆಯ್ಕೆ ಯಾಗಿದೆಯೇ ಹಣ ಪ್ರಭಾವ ಇರುವ ವ್ಯಕ್ತಿ ಗಳಲ್ಲದೇ?
ರಾಜೇಶ್ ಅಂಚನ್ ಎಂ ಬಿ: ಬಹಳ ಒಳ್ಳೆಯ ನಿರ್ಧಾರ. ವಿಧಾನ ಪರಿಷತ್ ನಿಜಕ್ಕೂ ಅನಾವಶ್ಯಕ. ತಮಗೆ ಬೇಕಾದವರನ್ನು ಅವರಿಗೆ ಅರ್ಹತೆ ಇರಲಿ ಬಿಡಲಿ ನಾಮ ನಿರ್ದೇಶನ ಮಾಡಿ ಅವರಿಗೆ ಸಚಿವ ಸ್ಥಾನ ನೀಡೋದು ಪ್ರಜಾಪ್ರಭುತ್ವದ ಅಣಕ. ಇದು ರಾಜ್ಯ ಸಭೆಗೆ ಸಹ ಅನ್ವಯವಾಗುತ್ತೆ. ನೇರವಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆ ಆಗದವರನ್ನು , ಚುನಾವಣೆಯಲ್ಲಿ ಸೋತವರನ್ನು ಈ ಪರಿಷತ್, ರಾಜ್ಯ ಸಭೆಯ ಮೂಲಕ ಮತ್ತೆ ಸ್ಥಾನ ನೀಡೋದು ಮತದಾರನಿಗೆ ಮಾಡೋ ಅವಮಾನ ಆಗುತ್ತೆ. ಈ ಎರಡು ಸಾಧನಗಳನ್ನು ಆದಷ್ಟು ಬೇಗ ರದ್ದು ಗೊಳಿಸಬೇಕು..
ಶ್ರೀಧರ್ ಉಡುಪ: ವಿಧಾನ ಪರಿಷತ್ ನಿಜಕ್ಕೂ ಇಂದು ‘ಚಿಂತಕರ ಚಾವಡಿ’ಯಾಗಿ ಉಳಿದಿರುವುದೇ ಎನ್ನುವುದು ಮೂಲ ಪ್ರಶ್ನೆ. ಆರ್ಟಿಕಲ್ 168 ಹಾಗೂ169ರನ್ವಯ ಪಾರ್ಲಿಮೆಂಟ್ ಯಾವುದೇ ರಾಜ್ಯದ ವಿಧಾನ ಪರಿಷತ್ತನ್ನು ಆ ರಾಜ್ಯದ ವಿಧಾನಸಭೆಯ ಮೂರನೇ ಎರಡಾಂಶ ಬಹುಮತದ ಶಿಫಾರಸ್ಸಿನ ಮೇರೆಗೆ ರದ್ದು ಮಾಡುವ ಅಧಿಕಾರವನ್ನು ಹೊಂದಿದೆ. ವಿಧಾನಸಭೆಯ ಪ್ರತಿಯೊಂದು ಕಲಾಪ ಹಾಗೂ ಗೊತ್ತುವಳಿಗಳ ಕುರಿತು ಪರಿಷತ್ತು ರಚನಾತ್ಮಕ ಪರಾಮರ್ಶೆ ಮಾಡದೆ ಕೇವಲ ರಾಜಕೀಯ ಕಾರಣಗಳಿಂದ ವಿರೋಧಿಸುವುದೇ ಗುರಿಯನ್ನು ಹೊಂದಿದ್ದರೆ ಅಂತಹ ಪರಿಷತ್ತಿನ ರದ್ದತಿಯಿಂದ ಸರಕಾರ ಯಂತ್ರ ವೇಗವಾಗಿ ಚಲಿಸುವುದಲ್ಲದೆ ರಾಜ್ಯ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಲಾಭವಾಗುತ್ತದೆ. ಆದರೆ ವಿಧಾನ ಪರಿಷತ್ತಿನ ರದ್ದತಿಯ ಕ್ರಮವು ಕೇವಲ ರಾಜ್ಯದ ವಿರೋಧ ಪಕ್ಷಗಳ ದನಿಯನ್ನು ದಮನಿಸುವ ‘ರಾಜಕೀಯ ತಂತ್ರ’ ವಾದರೆ ಪ್ರಜಾತಂತ್ರಕ್ಕೆ ಮಾರಕವಾದೀತು.
ರವಿಕುಮಾರ್ ಎಸ್ ಪಾಲ್ಯ: ಅಲ್ಲಿ ಚಿಂತನೆ ನಡೆಯುತ್ತಿದೆಯೇ. ನಡೆದಾಗ್ಯೂ ಅದಕ್ಕೆ ಬೆಲೆ ಇದೆಯೇ.? ಬಹುಶಃ ರಾಜಕೀಯ ಅಸ್ತಿತ್ವಕ್ಕಾಗಿ ಮಾತ್ರ ಬಳಕೆಯಾಗುತ್ತಿದೆ ಎಂಬ ಮಾತು ನಗ್ನಸತ್ಯವಾಗದೆ ಉಳಿದಿಲ್ಲ.