Advertisement

ಜೈನ ಮಠದಲ್ಲಿ 2622ನೇ ಮಹಾವೀರ ಜಯಂತಿ

03:31 PM Apr 05, 2023 | Team Udayavani |

ಚನ್ನರಾಯಪಟ್ಟಣ: ರಾಜ ವಂಶದಲ್ಲಿ ಜನಿಸಿದರೂ ಸಹ ವೈರಾಗ್ಯ ತಾಳಿ, 12 ವರ್ಷಗಳ ನಿರಂತರ ತಪಸ್ಸಿನಿಂದ ಕೇವಲಜ್ಞಾನ ಪಡೆದು ಜಗತ್ತಿಗೆ ಅಹಿಂಸಾ ತತ್ವವನ್ನು ಬೋಧಿಸಿದ ಮಹಾನ್‌ ತ್ಯಾಗಿ ಭಗವಾನ್‌ ಮಹಾವೀರ ಸ್ವಾಮಿ ಎಂದು ಶ್ರವಣಬೆಳಗೊಳ ಜೈನ ಮಠದ ನೂತನ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಅಭಿನವ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಶ್ರವಣಬೆಳಗೊಳದ ಜೈನಮಠದ ಬಸದಿಯಲ್ಲಿ ಆಯೋಜಿಸಿದ್ದ 2622ನೇ ಮಹಾವೀರ ಜಯಂತಿ ಕಾರ್ಯಕ್ರಮದ ಪಾವನ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬದುಕು ಬದುಕಲು ಬಿಡು ಎಂಬ ಮುಖ್ಯ ಸಂದೇಶದೊಂದಿಗೆ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳನ್ನು ಸಮಾನವಾಗಿ ನೋಡ ಬೇಕು. ಯಾವ ಜೀವಿಯನ್ನು ಹಿಂಸಿಸುವ ಅಧಿಕಾರ ನಮಗಿಲ್ಲ ಎಂದು ಭಗ ವಾನ್‌ ಮಹಾವೀರರು 2600 ವರ್ಷಗಳ ಹಿಂದೆಯೇ ಬೋಧಿಸಿದ್ದಾರೆ ಎಂದ ರು. ಅಹಿಂಸೆ ತತ್ವ ಪಾಲಿಸಿ: ಮಹಾವೀರರು ಅಹಿಂಸಾ ಪರಮೋಧರ್ಮ ಎನ್ನುವುದು ಪ್ರಸ್ತುತ ದಿನದಲ್ಲಿ ನಮ್ಮೆಲ್ಲರಿಗೂ ಮಂತ್ರವಾಗಬೇಕು. ಭಗವಾನ್‌ ಮಹಾವೀರರು ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಮುಂತಾದವುಗಳ ಭೋದನೆಗಳೊಂದಿಗೆ ಜನರನ್ನು ಜ್ಞಾನದ ಹಾದಿಯಲ್ಲಿ ನಡೆಸಿದರು ಎಂದು ತಿಳಿಸಿದರು.

ಬೋಧನೆಗಳನ್ನು ಪಾಲಿಸೋಣ: ಜೀವನವು ಒಬ್ಬ ವ್ಯಕ್ತಿಯ ಅಥವಾ ಒಂದು ಜನ್ಮದ ಕಥೆಯಲ್ಲ, ಅನೇಕ ಭವ ಗಳಲ್ಲಿ ಬಳಲಿ ಆತ್ಮವಿಕಾಸದ ಚರಮ ಸೀಮೆಯಲ್ಲಿ ನಿಂತ ಜೀವಾತ್ಮದ ಮುಕ್ತಿಯ ಆದರ್ಶದ ಚರಿತೆ. ಮಹಾವೀರರ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಧರ್ಮ, ಪಂಗಡಗಳು ಎನ್ನದೆ ಎಲ್ಲರೂ ಒಗ್ಗಟ್ಟಿನಿಂದ ಅವರು ತೋರಿಸಿದ ದಾರಿಯಲ್ಲಿ ನಡೆಯುತ್ತಾ ಅವರ ಸಂದೇಶ ಇಡೀ ವಿಶ್ವಕ್ಕೆ ಸಾರೋಣ ಎಂದು ತಿಳಿಸಿದರು.

ರಾಜಬೀದಿಯಲ್ಲಿ ಸಡಗರದ ಮೆರವಣಿಗೆ: ಪ್ರಾತಃ ಕಾಲದಿದಂದಲೇ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಆರಂಭ ಗೊಂಡು ಭಗವಾನ್‌ ಮಹಾವೀರ ಸ್ವಾಮಿಯವರ ಮೂರ್ತಿ ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಶ್ರವಣಬೆಳಗೊಳದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾ ಯಿತು. ನಂತರ ಶ್ರೀಮಠದಲ್ಲಿ ಜಲ, ಶ್ರೀಗಂಧ, ಅರಿಶಿಣ, ಕ್ಷೀರ, ಚತುಷೊRàನ, ಅಷ್ಟಗಂಧ, ಪಂಚಾಮೃತ ಅಭಿಷೇಕದೊಂದಿಗೆ ಪುಷ್ಪಾರ್ಚನೆ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ಪದ್ಧತಿಯಂತೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪೀಠಾರೋಹಣ ಮಾಡಿ ಮಂಗಲ ಉದ್ಭೋದನೆ ಮಾಡಿದರು.

ಈ ಸಂದರ್ಭದಲ್ಲಿ ಭಗವಾನ್‌ ಮಹಾವೀರ ಸ್ವಾಮಿಯವರ ವಿಶೇಷ ಪೋಸ್ಟ್‌ ಕಾರ್ಡ್‌ ಬಿಡುಗಡೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next