Advertisement
ಅವರೊಂದಿಗೆ 19 ಮಂದಿ ಇತರ ನಾಯಕರೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಎನ್‌ಪಿಸಿ ಮೇಘಾಲಯದಲ್ಲಿ ಆಡಳಿತ ಪಕ್ಷವಾಗಿದ್ದು, ಅರುಣಾ ಚಲ ಪ್ರದೇಶದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಲು ಮುಂದಾಗಿದೆ. ಅರುಣಾಚಲ ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯಲಿದ್ದೇವೆ ಎಂದು ಎನ್‌ಪಿಪಿ ಪ್ರಧಾನ ಕಾರ್ಯದರ್ಶಿ ಥಾಮಸ್ ಸಂಗ್ಮಾ ತಿಳಿಸಿದ್ದಾರೆ.
ಕೇರಳದ ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿಪಕ್ಷ ಯುಡಿಎಫ್ನ 9 ಶಾಸಕರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಎರಡು ರಂಗಗಳೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಅಂತಿಮಪಡಿಸಿದ್ದು, ಅವರು ಈಗಾಗಲೇ ಪ್ರಚಾರದಲ್ಲಿ ನಿರತ ರಾಗಿದ್ದಾರೆ. ಎಲ್‌ಡಿಎಫ್ನ 6, ಯುಡಿ ಎಫ್ನ ಮೂವರು ಶಾಸಕರು ಕಣದಲ್ಲಿ ದ್ದಾರೆ. ಯುಡಿಎಫ್ನ ಅಡೂರ್ ಪ್ರಕಾಶ್ (ಅಟ್ಟಿಂಗಳ್), ಹಿಬಿ ಎಡೆನ್ (ಎರ್ನಾ ಕುಳಂ), ಎಲ್‌ಡಿಎಫ್ನ ಎ.ಪ್ರದೀಪ್ ಕುಮಾರ್ (ಕಲ್ಲಿಕೋಟೆ), ಎಂ.ಆರಿಫ್ (ಆಲಪ್ಪುಳ) ಪ್ರಮುಖರಾಗಿದ್ದಾರೆ.