Advertisement
ಆ ಬಳಿಕ ಬ್ಯಾಂಕ್ ಸಿಬಂದಿ ಹೆಚ್ಚುವರಿಯಾಗಿ ಹಣ ಪಡೆದ ಗ್ರಾಹಕರನ್ನು ಸಂಪರ್ಕಿಸಿ ಹಣ ಹಿಂದಿರುಗಿಸುವಂತೆ ಮನವಿ ಮಾಡಿದರು. ಕೆಲವರು ಹಿಂದೇಟು ಹಾಕಿದ್ದರಿಂದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪೊಲೀಸರ ಕರೆಗೆ ಬೆಚ್ಚಿದ ಉಳಿದ ಗ್ರಾಹಕರೆಲ್ಲರೂ ಬ್ಯಾಂಕ್‌ಗೆ ತೆರಳಿ ಹಣ ವಾಪಸ್ ಮಾಡಿದರು. ಈ ಮೂಲಕ ಎಟಿಎಂನಿಂದ ಹೆಚ್ಚುವರಿಯಾಗಿ ಗ್ರಾಹಕರ ಕೈಸೇರಿದ 1.50 ಲಕ್ಷ ರೂ. ಸುರಕ್ಷಿತವಾಗಿ ಬ್ಯಾಂಕ್‌ಗೆ ಜಮೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
2019ರ ಡಿ. 30ರಂದು ಖಾಸಗಿ ಏಜೆನ್ಸಿಯ ಸಿಬಂದಿ ಕೊಹಿನೂರು ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಹಣ ತುಂಬಿದ್ದು. ಈ ಸಂದರ್ಭ 100 ರೂ. ಹಾಕುವ ಟ್ರೇಯಲ್ಲಿ 500 ರೂ. ಮುಖಬೆಲೆಯ ನೋಟುಗಳನ್ನು ತುಂಬಿರುವುದು ಸಿಬಂದಿಯ ಗಮನಕ್ಕೆ ಬಾರದಿದ್ದುದು ಈ ಎಡವಟ್ಟಿಗೆ ಕಾರಣವಾಗಿದೆ. ಗ್ರಾಹಕರು ಎಟಿಎಂಗೆ ಬಂದು 500 ರೂ. ಡ್ರಾ ಮಾಡಲು ಮುಂದಾದಾಗ 100 ರೂ.ಗಳ ಐದು ನೋಟು ಬದಲು 500 ರೂ.ಗಳ ಐದು ನೋಟು ಬರುತಿತ್ತು. ಆಶ್ಚರ್ಯಗೊಂಡರೂ ಕೆಲವರು ಸಿಕ್ಕಿದ್ದೇ ಲಾಭ ಎಂದು ಹಣವನ್ನು ಜೇಬಿಗಿಳಿಸಿಕೊಂಡಿದ್ದರು. ಕೆಲವರಂತೂ ಹಲವು ಬಾರಿ ಹಣ ಡ್ರಾ ಮಾಡಿರುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕೆನರಾ ಬ್ಯಾಂಕಿನ ಗ್ರಾಹಕ ಶ್ರೀಧರ್ ಈ ಎಟಿಎಂ ನಿಂದ ಹಣ ಪಡೆಯಲು ಬಂದಾಗ ಹೆಚ್ಚು ಹಣ ಬಂದದ್ದನ್ನು ನೋಡಿ ಎಟಿಎಂ ಕೇಂದ್ರದಲ್ಲಿ ದೋಷವಿರಬೇಕೆಂದು ಬ್ಯಾಂಕಿಗೆ ದೂರು ಕೊಟ್ಟಾಗಲೇ ವಿಷಯ ಬೆಳಕಿಗೆ ಬಂದದ್ದು. ತತ್‌ಕ್ಷಣ ಬ್ಯಾಂಕ್ ಸಿಬಂದಿ ಎಟಿಎಂ ಕೇಂದ್ರವನ್ನು ಮುಚ್ಚಿದರು.