Advertisement

2500 ಗೊಂಬೆಗಳ ದರ್ಬಾರ್‌

12:39 PM Sep 23, 2017 | Team Udayavani |

ದಸರೆಯ ಸಂದರ್ಭದಲ್ಲಿ, ಗೊಂಬೆಗಳನ್ನು ಅಲಂಕರಿಸಿ, ಅವುಗಳನ್ನು ಸಾಲುಸಾಲಾಗಿ ಜೋಡಿಸಿಟ್ಟು ದೀಪಾಲಂಕಾರ ಮಾಡಿ ಪ್ರದರ್ಶಿಸುವ ಪದ್ಧತಿ ನಾಡಿನ ಹಲವು ಭಾಗಗಳಲ್ಲಿದೆ. ಗೊಂಬೆಗಳ ಪೈಕಿ ಮುಖ್ಯವಾದದ್ದು ಪಟ್ಟದ ಗೊಂಬೆ. ಅಂದರೆ, ರಾಜ ಮತ್ತು ರಾಣಿಯ ಗೊಂಬೆ. ಈ ಗೊಂಬೆಗಳನ್ನು ಚಂದನ ಅಥವಾ ರೋಸ್‌ ಮರದಿಂದ ತಯಾರಿಸುತ್ತಾರೆ. 

Advertisement

ಬೆಂಗಳೂರಿನ ತ್ಯಾಗರಾಜನಗರದ ನಿವಾಸಿ ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ತಮ್ಮ ಮನೆಯಲ್ಲಿ ಪ್ರತಿ ನವರಾತ್ರಿ ಅಂಗವಾಗಿ ಗೊಂಬೆಗಳನ್ನು ಜೋಡಿಸುತ್ತಾ ಬಂದಿದ್ದಾರೆ. ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ಬಳಿ 32 ಪಟ್ಟದ ಗೊಂಬೆಗಳಿವೆ. ಪ್ರತಿ ಬಾರಿ ಇವರು ಒಂದಿಲ್ಲೊಂದು ವಿಶೇಷ ರೀತಿಯಲ್ಲಿ ಗೊಂಬೆಗಳನ್ನು ಪ್ರದರ್ಶಿಸುತಾರೆ. ಇವರ ಬಳಿ 2500ಕ್ಕೂ ಹೆಚ್ಚು ಗೊಂಬೆಗಳ ಸಂಗ್ರಹವಿದೆ. 

ಪಟ್ಟದ ಗೊಂಬೆಗಳ ಮೂಲ: ಈ ಪಟ್ಟದ ಗೊಂಬೆಗಳ ಮೂಲ ಕೋಲಾರ ಜಿಲ್ಲೆಯ ಅಷ್ಟಗ್ರಾಮಗಳಲ್ಲಿ ಒಂದಾದ ಮುಳಬಾಗಿಲು ತಾಲೂಕಿನ ಕೊತ್ತಮಂಗಲ ಗ್ರಾಮದ ರಿಗ್ರೆಟ್‌ ಅಯ್ಯರ್‌ ಪಾರಂಪರಿಕ ವಂಶದ್ದು (1700ನೇ ಇಸವಿಯಿಂದ). ಈ ಪಟ್ಟದ ಬೊಂಬೆಗಳು ವಂಶಪಾರಂಪರ್ಯವಾಗಿ 10 ತಲೆಮಾರಿನಿಂದ ಸಾಗುತ್ತಾ ಬಂದಿದ್ದು, ಅವುಗಳನ್ನು ಈಗ ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ಕಾಪಾಡಿಕೊಂಡು ಬಂದಿದ್ದಾರೆ.

“ಪ್ರತಿವರ್ಷ ಪಟ್ಟದ ಗೊಂಬೆಗಳನ್ನು ಹಾಗೂ ಉಳಿದ 2500ಕ್ಕೂ ಹೆಚ್ಚು ಗೊಂಬೆಗಳನ್ನು ನವರಾತ್ರಿ ಅಂಗವಾಗಿ ಜೋಡಿಸಿ ಪೂಜಿಸಿದಾಗ ಹಿಂದಿನವರ ಬದುಕು, ನಮ್ಮ ಸಂಸ್ಕೃತಿ, ಪರಂಪರೆ… ಮುಂತಾದ ಎಲ್ಲಾ ನೆನಪುಗಳು ಮರುಕಳಿಸುತ್ತವೆ’ ಎನ್ನುತ್ತಾರೆ ವಿಜಯಲಕ್ಷ್ಮಿ. 

ಇಲ್ಲಿ ಏನೇನಿದೆ?
– 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ದಸರಾ ಮಹೋತ್ಸವ ನಡೆದು ಬಂದ ರೀತಿ ಹಾಗೂ ಇಂದಿನ ನಾಡಹಬ್ಬದ ಜಂಬೂಸವಾರಿ ಚಿತ್ರಗಳು ಮತ್ತು ಗೊಂಬೆಗಳು.

Advertisement

– God’s own technology ಹೆಸರಿನಲ್ಲಿ ಗೂಗಲ್‌ ಈಶ್ವರ, ಸೆಲ್ಪಿà ವಿಷ್ಣು, ವಾಟ್ಸಾಪ್‌ ಗಣೇಶನನ್ನು ತಯಾರಿಸಲಾಗಿದೆ.

– ಸ್ಟೀಲ್‌ ಪಾತ್ರೆ (ಕೊಳಪತಲೆ)ಯಿಂದ ಈಶ್ವರ (2 ಅಡಿ ಎತ್ತರ), ಸ್ಟೀಲ್‌ ಪಾತ್ರೆ ಬಳಸಿ ಸರಸ್ವತಿ ವಿಗ್ರಹ (2.5 ಅಡಿ ಎತ್ತರ).

– 366 ವರ್ಷಗಳ ಹಳೆಯ ಶ್ರೀ ಲಕ್ಷ್ಮಿನಾರಾಯಣ.

– 250 ವರ್ಷಗಳಷ್ಟು ಹಳೆಯ 32 ವಿವಿಧ ಅಳತೆಯ ಅಲಂಕರಿಸಿದ ಪಟ್ಟದ ಗೊಂಬೆಗಳು.

– 2500 ಹೆಚ್ಚು ಗೊಂಬೆಗಳನ್ನು ಜೋಡಿಸಿಡಲಾಗಿದೆ.

– ಆಕರ್ಷಕ ಪಕ್ಷಿ ಪಾರ್ಕ್‌.

*ರಿಗ್ರೆಟ್‌ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next