ಶಿರಾ: ಈ ವರ್ಷದಿಂದ ಎಲ್ಲಾ ರೆಸಿಡೆನ್ಸಿ ಶಾಲೆಗಳಲ್ಲಿ ಸ್ಥಳೀಯರಿಗೆ ಶೇ.25ರಷ್ಟು ಮೀಸಲಿಟ್ಟು ನೋದಾಯಿಸಿ ಕೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ತಾಲೂಕಿನ ಚಿಕ್ಕನಾಯಕನಹಳ್ಳಿ ವಿಧಾನಸಭಾಕ್ಷೇತ್ರಕ್ಕೆ ಸೇರಿದ ರಂಗನಹಳ್ಳಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ವಸತಿ ಶಾಲಾ ಸಮುಚ್ಚಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿರು.
ನಾನು ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಚರ್ಚಿಸಿ ವಸತಿ ಶಾಲೆಗಳಲ್ಲಿ ಕನಿಷ್ಠ ಶೇ.25 ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬೇಕೆಂದು ತೀರ್ಮಾನಿಸಿ ಸರ್ಕಾರಿ ಆದೇಶ ಮಾಡಿಸಲಾಗಿದೆ ಎಂದರು. ಉಪಮುಖ್ಯಮಂತ್ರಿ ಗೋವಿಂದ.ಎಂ.ಕಾರಾಜೋಳ ಮಾತನಾಡಿ, ರಂಗನಹಳ್ಳಿಯಲ್ಲಿ (ರಂಗನಾಥಪುರ) ಸುಮಾರು 20 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ವರ್ಗಗಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇವೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 135 ವಸತಿ ಶಾಲೆಗಳನ್ನು ಪ್ರಾರಂಭ ಮಾಡಿಸಿದ್ದೇವೆ. ಕಾರಣ ಬಡವರ ಮಕ್ಕಳು ಓದಬೇಕಾದರೆ ಉತ್ತಮವಾದ ಮೂಲ ಸೌಕರ್ಯಗಳು, ಕಟ್ಟಡ, ಓದಲಿಕ್ಕೆ ಪರಿಶುದವಾದ ವಾತಾವರಣ ಇರಬೇಕೆನ್ನುವ ಉದ್ದೇಶ ದಿಂದ ವಸತಿ ಶಾಲೆಗಳನ್ನು ಪ್ರಾರಂಭಿಸುತ್ತಿದ್ದೇವೆ ದರು. ಸುಮಾರು ಕಡೆ ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ಶೌಚಾಲಯಕ್ಕೂ ತೊಂದರೆ ಹಾಗೂ ಅನೇಕ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗಿ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತಿತ್ತು.
ಸುಮಾರು 4 ಲಕ್ಷ ಮಕ್ಕಳು ಸಮಾಜಕಲ್ಯಾಣ ಇಲಾಖೆಯಲ್ಲಿ ಊಟ, ವಸತಿ ವ್ಯವಸ್ಥೆ ಇದೆ. ನಮ್ಮ ವಸತಿ ಶಾಲೆಗಳಲ್ಲಿ ಓದುವಂತ ಮಕ್ಕಳು ಶಿಕ್ಷಣದಲ್ಲಿ ಇಡೀ ರಾಜ್ಯದಲ್ಲಿ ಮುಂದೆ ಇದ್ದು ಶೇ.96 ಫಲಿತಾಂಶ ಬರುತ್ತಿದೆ. ಯಾರು ಸಮಾಜದಲ್ಲಿ ಶೋಷಿತ ರಿದ್ದರು, ಶಿಕ್ಷಣದಿಂದ ವಂಚಿತರಾಗಿದ್ದವರ ಮಕ್ಕಳಿಗೆ ಸರ್ಕಾರ ಉತ್ತಮ ವ್ಯವಸ್ಥೆ ಇವತ್ತು ಕಲ್ಪಿಸಲಾಗಿದೆ ಎಂದರು.
ಜಿಪಂ ಅಧ್ಯಕ್ಷೆ ಲತಾ, ಶಾಸಕ ಬಿ.ಸತ್ಯನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಕೆ.ಎ.ತಿಪ್ಪೇಸ್ವಾಮಿ, ಜಿಪಂ ಉಪಾಧ್ಯಕ್ಷೆ ಶಾರದಾ, ಸದಸ್ಯ ಬಿ.ಸಿ.ಜಯಪ್ರಕಾಶ್, ತಾಪಂ ಅಧ್ಯಕ್ಷ ಚಂದ್ರಯ್ಯ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ತಹಶೀಲ್ದಾರ್ ನಾಹಿದಾ ಜಂಜಂ, ತುಮುಲ್ ನಿರ್ದೇಶಕ ಎಸ್.ಆರ್. ಗೌಡ, ಜಿಪಂ ಸಿಇಒ ಶುಭಾಕಲ್ಯಾಣ್ ಇತರರು ಇದ್ದರು.