ಮೈಸೂರು: ಸರ್ವೋದಯ ಕರ್ನಾಟಕ ಪಕ್ಷವನ್ನು ಸ್ವರಾಜ್ ಇಂಡಿಯಾದಲ್ಲಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ, ಸಾಹಿತಿ ದೇವನೂರು ಮಹಾದೇವ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.25ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸರ್ವೋದಯ ಕರ್ನಾಟಕ ಪಕ್ಷವನ್ನು ಸ್ವರಾಜ್ ಇಂಡಿಯಾದಲ್ಲಿ ವಿಲೀನ ಗೊಳಿಸಲಾಗುವುದು. ಎಎಪಿಯಿಂದ ಹೊರಬಂದಿರುವ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಪೊ›.ಆನಂದ್ ಕುಮಾರ್ ಮತ್ತಿತರರು, ತಳಮಟ್ಟದಿಂದ ರಾಜಕಾರಣ ಕಟ್ಟಲು ರಾಷ್ಟ್ರ ಮಟ್ಟದಲ್ಲಿ ಆರಂಭಿಸಿದ ಸ್ವರಾಜ್ ಅಭಿಯಾನವನ್ನು ಸ್ವರಾಜ್ ಇಂಡಿಯಾ ಪಕ್ಷವಾಗಿ ಸ್ಥಾಪಿಸಿದ್ದಾರೆ ಎಂದು ಹೇಳಿದರು.
ಸರ್ವೋದಯ ಪಕ್ಷ ವಿಲೀನ ಕಾರ್ಯಕ್ರಮದ ಸಂಚಾಲಕರಾಗಿ ಕರುಣಾಕರನ್ ಮತ್ತು ಸಾಗರದ ವಸಂತಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ ಸಿದ್ಧತಾ ಸಮಿತಿಯನ್ನೂ ರಚಿಸಲಾಗಿದೆ. ಈಗಿನ ರಾಜಕಾರಣದಿಂದ ಬೇಸತ್ತಿರುವ ಹಲವಾರು ಮಂದಿ ಸ್ವರಾಜ್ ಇಂಡಿಯಾ ಕುರಿತು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅವರು ಹೇಳಿದರು.
ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ದಸಂಸ ರಾಜಾÂಧ್ಯಕ್ಷ ಗುರು ಪ್ರಸಾದ್ ಕೆರಗೋಡು, ದೊಡ್ಡಿಪಾಳ್ಯ ನರಸಿಂಹಮೂರ್ತಿ, ವಿ.ನಾಗರಾಜ್, ಪರಶುರಾಮೇಗೌಡ, ಕರುಣಾಕರನ್, ಅಭಿರುಚಿ ಗಣೇಶ, ವಸಂತಕುಮಾರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಅತಿವೃಷ್ಟಿಯೇ ತಿರುಗುಬಾಣ: ಅತಿವೃಷ್ಟಿ, ಅನಾವೃಷ್ಟಿ ಪ್ರಕೃತಿ ಸಹಜ ಗುಣ. ಆದರೆ, ಯಾವುದೂ ಬಹಳ ಕಾಲ ನಿಲ್ಲುವುದಿಲ್ಲ ಎಂದು ಉತ್ತರಪ್ರದೇಶ ಚುನಾವಣೆಯ ಫಲಿತಾಂಶ ಕುರಿತು ದೇವನೂರು ಮಹಾದೇವ ಪ್ರತಿಕ್ರಿಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ಚುನಾ ವಣೆಯಲ್ಲಿ ಅತಿವೃಷ್ಟಿಯ ಪಲ ಅನುಭವಿಸುತ್ತಿರುವ ಪಕ್ಷಕ್ಕೆ ಅಂತಿಮವಾಗಿ ಅತಿವೃಷ್ಟಿಯೇ ತಿರುಗು ಬಾಣವಾಗಲಿದೆ ಎಂದರು.
ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರು ತಮಗಾಗಿರುವ ರಾಜಕೀಯ ಅನ್ಯಾಯವನ್ನು ಪತ್ರಿಷ್ಠೆ ಯಾಗಿ ತೆಗೆದುಕೊಳ್ಳಬಾರದಿತ್ತು. ಇದು ಕೋಪದ ಕೈಗೆ ಬುದ್ದಿ ಕೊಟ್ಟಂ ತಾಗಿದೆ. ರಾಜಕೀಯದಲ್ಲಿ ದಲಿತ ನಾಯಕರನ್ನು ಮಾತ್ರವಲ್ಲ ಬಹಳಷ್ಟು ಸಮುದಾಯಗಳ ಮುಖಂಡರನ್ನೂ ತುಳಿಯಲಾಗುತ್ತಿದೆ. ಸದ್ಯಕ್ಕೆ ದಲಿತರನ್ನು ಮುಖ್ಯಮಂತ್ರಿ ಮಾಡುವ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಹೇಳಿದರು.