Advertisement

ಕರ್ನಾಟಕ ಕಾಲೇಜು ಅಭಿವೃದ್ದಿಗೆ 25 ಲಕ್ಷ ಅನುದಾನ

05:41 PM Jul 25, 2022 | Team Udayavani |

ಬೀದರ: ಕರ್ನಾಟಕ ಕಾಲೇಜು ಶಿಸ್ತು ಮತ್ತು ಬದ್ಧತೆಗೆ ಹೆಸರುವಾಸಿಯಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಶಾಸಕ ರಹೀಮ್‌ ಖಾನ್‌ ಹೇಳಿದರು.

Advertisement

ನಗರದ ಕರ್ನಾಟಕ ಕಾಲೇಜಿನಲ್ಲಿ ನೂತನ ಗಣಕಯಂತ್ರ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಕೂಡ ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಇಲ್ಲಿ ಕಲಿತ ಪಾಠ ಮತ್ತು ಆಟ ಇಂದಿಗೂ ಮರೆತಿಲ್ಲ. ಇಂದಿನ ಕಾಲದಲ್ಲಿ ಒಂದು ಕುಟುಂಬ ನಡೆಸುವುದಕ್ಕೆ ಎಷ್ಟೋ ಕಷ್ಟವಾಗುತ್ತದೆ. ಆದರೆ ಇಂತಹ ಬೃಹತ್‌ ಕಾಲೇಜನ್ನು ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹಾಗೂ ಸಿಬ್ಬಂದಿ, ಪದಾಧಿಕಾರಿಗಳು ತುಂಬ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವುದು, ತನ್ಮೂಲಕ ಮಕ್ಕಳ ಬಾಳಿನ ಬೆಳಕಾಗಿ ಅವರ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿರುವುದು ಸ್ಮರಣೀಯ. ಹೀಗಾಗಿ ಅಧ್ಯಕ್ಷರ ಮನವಿಯಂತೆ ಕಾಲೇಜಿನ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ನೀಡಲಾಗುವುದು. ಮೊದಲ ಕಂತಿನಲ್ಲಿ 10 ಲಕ್ಷ ರೂ. ತಕ್ಷಣವೇ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕೆಆರ್‌ಇ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕ ರಹೀಮ್‌ ಖಾನ್‌ ಅವರಿಗೂ ಕರ್ನಾಟಕ ಕಾಲೇಜಿಗೂ ನಂಟಿದೆ. ಹೀಗಾಗಿ ಕಾಲೇಜಿನ ಅಭಿವೃದ್ಧಿಗೆ ಸಂಪೂರ್ಣ 25 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕರಾಶಿ ಸಂಸ್ಥೆ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಸಿದ್ರಾಮ ಪಾರಾ, ನಿರ್ದೇಶಕ ರವಿ ಹಾಲಹಳ್ಳಿ, ವಿಜ್ಞಾನ ಗಣಕಯಂತ್ರ ವಿಭಾಗದ ಮುಖ್ಯಸ್ಥ ಶ್ರೀಕಾಂತ ದೊಡ್ಡಮನಿ, ಪ್ರಮುಖರಾದ ವೀರಭದ್ರಪ್ಪ ಬುಯ್ನಾ, ಶ್ರೀನಾಥ ನಾಗೂರೆ, ಡಾ| ಜಗನ್ನಾಥ ಹೆಬ್ಟಾಳೆ, ಪ್ರೊ| ರಾಜೇಂದ್ರ ಬಿರಾದಾರ, ಬಸವರಾಜ ಕೂಡಂಬುಲ್‌, ಅನೀಲಕುಮಾರ ಚಿಕ್ಕಮಾಣೂರ ಸೇರಿದಂತೆ ಇತರರಿದ್ದರು. ಪ್ರಾಚಾರ್ಯ ಡಾ| ಎಂ.ಎಸ್‌. ಚೆಲ್ವಾ ಸ್ವಾಗತಿಸಿದರು. ಡಾ| ಬಿ.ವಿ. ರವಿಚಂದ್ರನ್‌ ನಿರೂಪಿಸಿದರು. ಅಶೋಕ ಹುಡೇದ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next