Advertisement

Rajya Sabha: 25 ವಿಧೇಯಕ ರಾಜ್ಯಸಭೆಯಲ್ಲಿ ಬಾಕಿ

08:51 PM Sep 07, 2023 | Team Udayavani |

ನವದೆಹಲಿ: ಪಂಚಾಯತ್‌ ಚುನಾವಣೆ ನಿಯಮಗಳ ಬದಲಾವಣೆಗಾಗಿ 1992ರಲ್ಲಿ ಮಂಡಿಸಿದ ತಿದ್ದುಪಡಿ ಮಸೂದೆಯೂ ಸೇರಿ 25 ಸರ್ಕಾರಿ ವಿಧೇಯಕಗಳು ರಾಜ್ಯಸಭೆಯಲ್ಲಿ ಬಾಕಿ ಉಳಿದಿವೆ ಎಂದು ಸರ್ಕಾರ ತಿಳಿಸಿದೆ.

Advertisement

ಬಾಕಿ ಉಳಿದಿರುವ ಮಸೂದೆಗಳ ಪೈಕಿ ಪಂಚಾಯತ್‌ ಚುನಾವಣೆಗೆ 2 ಮಕ್ಕಳ ದತ್ತು ಪಡೆಯುವ ನಿಯಮ ಪ್ರಸ್ತಾಪಿಸಿದ ಸಂವಿಧಾನ (79ನೇ ವಿಧಿ ) ತಿದ್ದುಪಡಿಯ 1992ರ ಮಸೂದೆ, 1997ರ ದೆಹಲಿ ಬಾಡಿಗೆ (ತಿದ್ದುಪಡಿ) ಮಸೂದೆ, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಾಯ್ದೆ (ತಿದ್ದುಪಡಿ )ಮಸೂದೆ 2008, ಪುರಸಭೆ ನಿಬಂಧನೆ ಮಸೂದೆ 2001, ದಿ ಸೀಡ್ಸ್‌ ಬಿಲ್‌ 2004, ದಿ ಇಂಡಿಯನ್‌ ಮೆಡಿಸಿನ್‌ ಆ್ಯಂಡ್‌ ಹೋಮಿಯೋಪಥಿ ಫಾರ್ಮಸಿ ಬಿಲ್‌ 2005, ಗಣಿ ತಿದ್ದುಪಡಿ ಮಸೂದೆ 2011, ಅಂತಾರಾಜ್ಯ ವಲಸೆ ಕಾರ್ಮಿಕ ತಿದ್ದುಪಡಿ ಮಸೂದೆ 2011ಗಳು ಸೇರಿವೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಅವರು ಕೇಳಿದ ಪ್ರಶ್ನೆಗೆ ಸರ್ಕಾರ ಲಿಖೀತ ರೂಪದಲ್ಲಿ ಉತ್ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next