Advertisement
ದಾವಣಗೆರೆಯ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 37 ಕಿವುಡ ಮತ್ತು ಮೂಗ ಮಕ್ಕಳು, ಒಬ್ಬರು ವಿಶೇಷಚೇತನ ವಿದ್ಯಾರ್ಥಿ ಹಾಗೂ ದುರ್ಗಾಂಬಿಕಾ ಅಂಧತ್ವ ಶಾಲೆಯ ಅಂಧ ಮಕ್ಕಳು ಸೇರಿದಂತೆ 24,712 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷಾ ಅವ್ಯವಹಾರ ನಡೆದಿಲ್ಲ.
Related Articles
Advertisement
ಹರಿಹರ ತಾಲೂಕಿನಲ್ಲಿ 1,700 ಗಂಡು, 1,651 ಹೆಣ್ಣು ಮಕ್ಕಳು ಒಳಗೊಂಡಂತೆ ಒಟ್ಟು 3,351 ನೋಂದಣಿಯಾಗಿದ್ದು, 87 ಗಂಡು, 66 ಹೆಣ್ಣು ಮಕ್ಕಳು ಸೇರಿ ಒಟ್ಟು 153 ವಿದ್ಯಾರ್ಥಿಗಳು ಗೈರಾಗಿದ್ದರು. 3,198 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಹೊನ್ನಾಳಿ ತಾಲೂಕಿನಲ್ಲಿ 1,317 ಗಂಡು, 1,411 ಹೆಣ್ಣು ಮಕ್ಕಳು ಒಳಗೊಂಡಂತೆ ನೋಂದಣಿಯಾಗಿದ್ದ ಒಟ್ಟು 2,728 ವಿದ್ಯಾರ್ಥಿಗಳಲ್ಲಿ 40 ಗಂಡು, 34 ಹೆಣ್ಣುಮಕ್ಕಳು ಸೇರಿ ಒಟ್ಟು 74 ವಿದ್ಯಾರ್ಥಿಗಳು ಗೈರಾಗಿದ್ದರು. 2,654 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಹರಪನಹಳ್ಳಿ ತಾಲೂಕಿನಲ್ಲಿ 1,995 ಗಂಡು, 1,733 ಹೆಣ್ಣುಮಕ್ಕಳು ಒಳಗೊಂಡಂತೆ ಒಟ್ಟು 3,728 ವಿದ್ಯಾರ್ಥಿಗಳು ನೋಂದಣಿಯಾಗಿದ್ದು 157 ಗಂಡು, 78 ಹೆಣ್ಣುಮಕ್ಕಳು ಸೇರಿ ಒಟ್ಟು 235 ವಿದ್ಯಾರ್ಥಿಗಳು ಗೈರಾಗಿ, 3,493 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಜಗಳೂರು ತಾಲೂಕಿನಲ್ಲಿ 1,129 ಗಂಡು, 1,132 ಹೆಣ್ಣುಮಕ್ಕಳು ಸೇರಿ ಒಟ್ಟು 2,261 ನೋಂದಣಿಯಾಗಿದ್ದವರಲ್ಲಿ 46 ಗಂಡು, 47 ಹೆಣ್ಣುಮಕ್ಕಳು ಒಳಗೊಂಡಂತೆ ಒಟ್ಟು 93 ವಿದ್ಯಾರ್ಥಿಗಳು ಗೈರಾಗಿದ್ದರು. 2,168 ವಿದ್ಯಾರ್ಥಿಗಳು ಹಾಜರಾಗಿದ್ದರು.
ಎಲ್ಲಾ ಕಡೆ ಶಾಂತಿಯುತವಾಗಿ ಪರೀಕ್ಷೆ ನಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್. ಎಂ. ಪ್ರೇಮಾ ತಿಳಿಸಿದ್ದಾರೆ.