Advertisement

ಇಂಗ್ಲೆಂಡ್‌ ಸರಣಿಗೆ ದಕ್ಷಿಣ ಆಫ್ರಿಕಾದ 24 ಸದಸ್ಯರ ತಂಡ

11:13 PM Nov 07, 2020 | sudhir |

ಜೊಹಾನ್ಸ್‌ಬರ್ಗ್: ಮುಂದಿನ ತಿಂಗಳು ಇಂಗ್ಲೆಂಡ್‌ ತಂಡದ ಆಗಮನ ಆಗುವುದರೊಂದಿಗೆ ದಕ್ಷಿಣ ಆಫ್ರಿಕಾದ ನೂತನ ಕ್ರಿಕೆಟ್‌ ಸರಣಿ ಗರಿಗೆದರಲಿದೆ. ನ. 27ರಿಂದ ಪ್ರಾರಂಭವಾಗಲಿರುವ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಗಾಗಿ 24 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.

Advertisement

ತಂಡಗಳನ್ನು ಕ್ವಿಂಟನ್‌ ಡಿ ಕಾಕ್‌ ಮುನ್ನಡೆಸಲಿದ್ದಾರೆ. ಇದರಲ್ಲಿ ದೊಡ್ಡ ಮಟ್ಟದ ಯಾವ ಬದಲಾವಣೆಯೂ ಸಂಭವಿಸಿಲ್ಲ. ಮಧ್ಯಮ ವೇಗಿ ಗ್ಲೆಂಟನ್‌ ಸ್ಟರ್‌ಮ್ಯಾನ್‌ ಈ ತಂಡದ ಹೊಸಮುಖ.

ದಕ್ಷಿಣ ಆಫ್ರಿಕಾ ತನ್ನ ಕೊನೆಯ ಅಂತಾರಾಷ್ಟ್ರೀಯ ಸರಣಿಯನ್ನು ಮಾರ್ಚ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿತ್ತು. ಅನಂತರ ಭಾರತಕ್ಕೆ ಆಗಮಿಸಿತು. ಆದರೆ ಕೋವಿಡ್‌-19 ಕಾರಣ ಈ ಸರಣಿಯನ್ನು ಮುಂದೂಡಲಾಯಿತು.

ಇದನ್ನೂ ಓದಿ:ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘರ್ಷ :10 ಅಂಗಡಿಗಳ ಪರವಾನಿಗೆ ಅಮಾನತು

ದಕ್ಷಿಣ ಆಫ್ರಿಕಾ ತಂಡ
ಕ್ವಿಂಟನ್‌ ಡಿ ಕಾಕ್‌, ಟೆಂಬ ಬವುಮ, ಜೂನಿಯರ್‌ ಡಾಲಾ, ಫಾ ಡು ಪ್ಲೆಸಿಸ್‌, ಫಾರ್ಟಿನ್‌, ನ್ಯೂರನ್‌ ಹೆಂಡ್ರಿಕ್ಸ್‌, ರೀಝ ಹೆಂಡ್ರಿಕ್ಸ್‌, ಹೆನ್ರಿಚ್‌ ಕ್ಲಾಸೆನ್‌, ಜಾರ್ಜ್‌ ಲಿಂಡೆ, ಕೇಶವ್‌ ಮಹಾರಾಜ್‌, ಜೇನ್ಮನ್‌ ಮಾಲನ್‌, ಡೇವಿಡ್‌ ಮಿಲ್ಲರ್‌, ಲುಂಗಿ ಎನ್‌ಗಿಡಿ, ಅನ್ರಿಚ್‌ ಜೋರ್ಜೆ, ಆ್ಯಂಡಿಲ್‌ ಫೆಲುಕ್ವಾಯೊ, ಡ್ವೇನ್‌ ಪ್ರಿಟೋರಿಯಸ್‌, ಕಾಗಿಸೊ ರಬಾಡ, ತಬ್ರೇಜ್‌ ಶಂಸಿ, ಲುಥೊ ಪ್ರಿಟೋರಿಯಸ್‌, ಜಾನ್‌-ಜಾನ್‌ ಸ್ಮಟ್ಸ್‌, ಗ್ಲೆಂಟನ್‌ ಸ್ಟರ್‌ಮ್ಯಾನ್‌, ಪೀಟ್‌ ವಾನ್‌ ಬಿಲ್ಜೋನ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಕೈಲ್‌ ವೆರೇನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next