Advertisement

ಪೌರತ್ವ ಮಸೂದೆ ವಿರೋಧಿಸಿ 24 ತಾಸು ಮಣಿಪುರ ಬಂದ್‌

06:47 AM Jan 31, 2019 | Team Udayavani |

ಇಂಫಾಲ : ಪೌರತ್ವ ತಿದ್ದುಪಡಿ ಮಸೂದೆಯನ್ನು ಪ್ರತಿಭಟಿಸಿ 66 ಸಂಘಟನೆಗಳು ನೀಡಿದ 24 ತಾಸುಗಳ ಬಂದ್‌ ಕರೆಯನ್ವಯ ಇಂದು ಮಣಿಪುರದ ಹಲವು ಭಾಗಗಳಲ್ಲಿ  ಜನಜೀವನ ತೀವ್ರವಾಗಿ ಬಾಧಿತವಾಯಿತು. 

Advertisement

ರಾಜ್ಯ ರಾಜಧಾನಿ ಇಂಫಾಲದ ವಿವಿಧ ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿವೆ. ತೌಬಾಲ್‌ ಹಾಗೂ ಲಿಲಾಂಗ್‌ ಪಟ್ಟಣಗಳಲ್ಲಿ ಪ್ರತಿಭನೆ ತೀವ್ರವಾಗಿ ನಡೆಯುತ್ತಿದೆ. 

ಇದೇ ರೀತಿ ಶೂರಚಂದಪುರ ಮತ್ತು ಕಾಂಗ್‌ಪೋಕ್‌ಪಿ ಪಟ್ಟಣದಲ್ಲೂ  ಜಾಥಾ, ಮೆರವಣಿ, ಪ್ರತಿಭಟನೆ ಇತ್ಯಾದಿ ನಡೆಯತ್ತಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಬಿಗಿ ಭದ್ರತಾ ವ್ಯವಸ್ಥೆ ಆಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next