ಹೊನ್ನಾವರ: ಜುಲೈ 20 ರಿಂದ 27ರ ವರೆಗೆ ಗ್ಯೂಮ್ರಿ, ಅರ್ಮೇನಿಯ ದೇಶದಲ್ಲಿ ನಡೆದ 23ನೇ IPCA ವಿಶ್ವ ಮಟ್ಟದ ವೈಯುಕ್ತಿಕ ಚೆಸ್ ಚಾಂಪಿಯನ್ ಶಿಫ್ ನಲ್ಲಿ ಹೊನ್ನಾವರದ ಸಿ.ಎಮ್. ಸಮರ್ಥ ಜಗದೀಶ್ ರಾವ್, 9 ಸುತ್ತಿನಲ್ಲಿ 6 ಪಂದ್ಯ ಗೆದ್ದು ವೀಲ್ ಚೆಯರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಅರ್ಮೇನಿಯದಲ್ಲಿ ಹಾರಿಸಿದ್ದಾನೆ.
ಚೆಸ್ ಚಾಂಪಿಯನ್ ಶಿಫ್ ನಲ್ಲಿ 14 ದೇಶಗಳಿಂದ 52 ಆಟಗಾರರು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ತನಗಿಂತ ಬಲಶಾಲಿ ಆಟಗಾರ, 2027 ರೇಟಿಂಗ್ ಇರುವ IM: Campos E ಹಾಗೂ 2034 ರೇಟಿಂಗ್ ಇರುವ FM: velanta vit ಮತ್ತು 1903 ರೇಟಿಂಗ್ ಇರುವ Tsapalin Sergey ಯೊಂದಿಗೆ ಜಯಗಳಿಸಿ. ತನ್ನ ರೇಟಿಂಗ್ ನಲ್ಲಿ 38 ಅಂಕ ಹೆಚ್ಚಿಸಿ ಈಗಿನ ರೇಟಿಂಗ್ 1796 ರಿಂದ 1835 ಕ್ಕೆ ಏರಿಸಿ ಕೊಂಡಿದ್ದಾನೆ.
ಈತ ಕೆನರಾ ಬ್ಯಾಂಕಿನ ನಿವೃತ್ತ ಉದ್ಯೋಗಿ ಶ್ರಿ ಜಗದೀಶ್ ರಾವ್ ಬಿ ಎಸ್. ಹಾಗೂ ಐಟಿಐ ತರಬೇತಿ ಅಧಿಕಾರಿ ಶ್ರೀಮತಿ ವಿನುತಾ ಭಟ್ ಇವರ ಹೆಮ್ಮೆಯ ಪುತ್ರ.
ಅಲ್ಲದೆ ನಮ್ಮ ಭಾರತದಿಂದ 5 ಆಟಗಾರರು ಭಾಗವಹಿಸಿದ್ದರು. ತಮಿಳುನಾಡಿನ ಕುಮಾರಿ: ಶೆರೋನ್ ರಾಕೇಲ್ ಎಬಿ 9 ಸುತ್ತಿನಲ್ಲಿ 2.5 ಅಂಕಗಳಿಸಿ ಜೂನಿಯರ್ ಗರ್ಲ್ಸ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾಳೆ.
ಇದನ್ನೂ ಓದಿ: World Tiger Day: ಕಂಡನಾ ಹುಲಿರಾಯನು…ಹುಲಿಯೊಂದಿಗೆ ಮುಖಾಮುಖಿ