Advertisement

ಪ್ರವಾಹದಿಂದ “ ಮಮ್ಮಿ” ಯನ್ನು ಉಳಿಸಲು ಹರಸಾಹಸ! ಏನಿದರ ವಿಶೇಷತೆ?

03:22 PM Aug 20, 2020 | keerthan |

ಜೈಪುರ: ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ಮೇಘ ಸ್ಫೋಟ ಸಂಭವಿಸಿ, ನೂರಾರು ಮನೆಗಳು- ವಾಹನಗಳು ನೀರಿನಲ್ಲಿ ಮುಳುಗಡೆಯಾಗುತ್ತಿದ್ದರೆ, ಇಲ್ಲಿನ ಐತಿಹಾಸಿಕ ಆಲ್ಬರ್ಟ್‌ ಹಾಲ್‌ ಮ್ಯೂಸಿಯಂನ ಸಿಬಂದಿ ಮಾತ್ರ ಬೇರೆಯೇ ರೀತಿಯ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

Advertisement

ಮ್ಯೂಸಿಯಂನೊಳಕ್ಕೆ ನೀರು ನುಗ್ಗುತ್ತಿದ್ದಂತೆ, ಸಿಬಂದಿಯು ನೆಲಮಾಳಿಗೆಯತ್ತ ಧಾವಿಸಿದರು. ಗಾಜಿನ ಪೆಟ್ಟಿಗೆಯೊಳಗೆ ಸಂರಕ್ಷಿಸಿಡಲಾಗಿದ್ದ 2400 ವರ್ಷಗಳಷ್ಟು ಹಳೆಯ ಈಜಿಪ್ಟ್ನ ಮಮ್ಮಿ(ಸಂರಕ್ಷಿಸಲ್ಪಟ್ಟ ಮೃತದೇಹ)ಯನ್ನು ರಕ್ಷಿಸುವುದೇ ಅವರ ಏಕೈಕ ಉದ್ದೇಶವಾಗಿತ್ತು.

ಎದೆಯ ಮಟ್ಟಕ್ಕೆ ನೀರು ತುಂಬಿದ್ದರೂ ಅದನ್ನು ಲೆಕ್ಕಿಸದೇ, ಮೊಬೈಲ್‌ ಫೋನಿನ ಟಾರ್ಚ್‌ ಬಳಸಿಕೊಂಡು, ಆ ಗಾಜಿನ ಪೆಟ್ಟಿಗೆ ಒಡೆದು ಒಳಗಿದ್ದ ಮಮ್ಮಿಯನ್ನು ಹೊತ್ತುಕೊಂಡು ಸುರಕ್ಷಿತ ಪ್ರದೇಶಕ್ಕೆ ಒಯ್ದಿದ್ದಾರೆ. ಬಹಳ ಪ್ರಾಚೀನ ಕಾಲದ ಮಮ್ಮಿಯಾಗಿರುವ ಕಾರಣ, ಅದು ನಮ್ಮ ಮ್ಯೂಸಿಯಂನಲ್ಲಿ ಸ್ಥಳೀಯ ಹಾಗೂ ವಿದೇಶಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಅದನ್ನು ಸುರಕ್ಷಿತವಾಗಿಡಲು ಹರಸಾಹಸ ಪಡಬೇಕಾಯಿತು ಎಂದು ಮ್ಯೂಸಿಯಂನ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next