Advertisement

“ಬಯಲು ಶೌಚಮುಕ್ತಕ್ಕೆ 23 ದಿನ ಗಡುವು’

11:37 AM Jul 23, 2017 | |

ಹುಣಸೂರು: ತಾಲೂಕಿನಲ್ಲಿ ಇನ್ನೂ 2400 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿಲ್ಲ. ಆಗಸ್ಟ್‌ 15 ರೊಳಗೆ ಹುಣಸೂರು ಬಯಲು ಮುಕ್ತ ತಾಲೂಕು ಎಂದು ಘೋಷಣೆ ಮಾಡಬೇಕಿದ್ದು, ವಿದ್ಯಾರ್ಥಿಗಳು ತಮ್ಮೂರಿನ ಜನರಿಗೆ ಶೌಚಾಲಯದ ಅಗತ್ಯತೆ ತಿಳಿಸಿ, ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳುವ ಜೊತೆಗೆ ಬಳಸುವಂತೆ ಪ್ರೇರೇಪಿಸಬೇಕು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್‌ ಮನವಿ ಮಾಡಿದರು. 

Advertisement

ನಗರದ ಆರ್ಯ ವೈಶ್ಯ ಕಲ್ಯಾಣ ಮಂಟಪದಲ್ಲಿ ಮಹಿಳಾ ಸರ್ಕಾರಿ ಪದವಿ ಕಾಲೇಜು, ತಾಲೂಕು ಪಂಚಾಯ್ತಿ, ಆರೋಗ್ಯ ಇಲಾಖೆ, ನಗರಸಭೆ, ಭಗೀರಥ ಸಂಸ್ಥೆ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಸ್ವತ್ಛ ಭಾರತ ಅಭಿಯಾನ ಹಾಗೂ ಡೆಂ à, ಚಿಕುನ್‌ಗುನ್ಯಾ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 1.05 ಲಕ್ಷ ಶೌಚ ಬಾಕಿ: ಕರ್ನಾಟಕದಲ್ಲಿ 1.80 ಕೋಟಿ, ಮೈಸೂರು ಜಿಲ್ಲೆಯಲ್ಲಿ 1.05 ಲಕ್ಷ ಹಾಗೂ ಹುಣಸೂರು ತಾಲೂಕಿನಲ್ಲಿ 2400 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಬೇಕಿದೆ. ಬರುವ ಆಗಸ್ಟ್‌ 15 ರೊಳಗೆ ಹುಣಸೂರು ತಾಲೂಕು ಬಯಲು ಮುಕ್ತ ತಾಲೂಕು ಎಂದು ಘೋಷಿಸಬೇಕಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಬಯಲು ಶೌಚ ಮುಕ್ತವಾಗದಿದ್ದರೆ ಸೌಲಭ್ಯ ಕಡಿತ: 2020ಕ್ಕೆ ಭಾರತ ಬಯಲು ಶೌಚಾಲಯ ಮುಕ್ತ ದೇಶವಾಗದಿದ್ದರೆ ವಿಶ್ವ ಸಂಸ್ಥೆ ನೀಡುವ ಎಲ್ಲಾ ಸೌಲಭ್ಯಗಳು ಕಡಿತವಾಗಲಿವೆ. 635 ಕೋಟಿ ಜನಸಂಖ್ಯೆ ಇರುವ ವಿಶ್ವದಲ್ಲಿ ಇನ್ನೂ 110 ಕೋಟಿ ಮಂದಿ ಶೌಚಾಲಯ ಬಳಸುತ್ತಿಲ್ಲ, ಈ ಪೈಕಿ ಭಾರತದಲ್ಲೇ 60 ಕೋಟಿ ಮಂದಿ ಇದ್ದಾರೆ. ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಬೂತಾನ್‌ ಶೇ. 100, ನೇಪಾಳ ಶೇ.99, ಪಾಕಿಸ್ತಾನ ಶೇ.96, ಬಾಂಗ್ಲಾದೇಶ ಶೇ. 95 ರಷ್ಟು ಮಂದಿ ಶೌಚಾಲಯ ಬಳಸುತ್ತಿದ್ದಾರೆ.

ಬಾಹ್ಯಾಕಾಶ, ಐಟಿ-ಬಿಟಿ ಕ್ಷೇತ್ರದಲ್ಲಿ ವಿಶ್ವದಲ್ಲೇ ಮನ್ನಣೆ ಪಡೆದಿರುವ ಭಾರತದಲ್ಲಿ ಇನ್ನೂ 60 ಕೋಟಿ ಮಂದಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳದೇ ಇರುವುದು ದೇಶದ ಮಾನ ಹರಾಜಾಗುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

Advertisement

ಶೌಚ ನಿರ್ಮಾಣಕ್ಕೆ ನೆರವು: ಸ್ವತ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ.  ಜೊತೆಗೆ ಸ್ವತ್ಛತೆ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಸಂಸ್ಕರಣೆ, ಮರುಬಳಕೆಗೆ ನೆರವು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು 15 ಸಾವಿರ ರೂ. ಹಾಗೂ ಸಾಮಾನ್ಯ ವರ್ಗಕ್ಕೆ 12 ಸಾವಿರ ರೂ. ಸಹಾಯಧನ ದೊರಯಲಿದೆ ಎಂದರು.

ತಹಶೀಲ್ದರ್‌ ಎಸ್‌.ಪಿ.ಮೋಹನ್‌ಕುಮಾರ್‌ ಮಾತನಾಡಿ, ಸ್ವತ್ಛತೆ ಪ್ರತಿ ಮನೆಯಿಂದಲೇ ಆರಂಭವಾಗಬೇಕು. ಕೊಳಗೇರಿಗಳು ಬದಲಾವಣೆಯಾಗಬೇಕಿದೆ ಎಂದು ತಿಳಿಸಿದರು. ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌, ಡೆಂಘೀ, ಚಿಕುನ್‌ಗುನ್ಯಾ ಹರಡುವಿಗೆ ಮತ್ತು ನಿಯಂತ್ರಣ ಕುರಿತು ಹಾಗೂ ನಗರಸಭೆ ಪರಿಸರ ಎಂಜಿನಿಯರ್‌ ರವಿಕುಮಾರ್‌,  ಘನತಾಜ್ಯ ವಸ್ತುಗಳ ವಿಲೇವಾರಿ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಪ್ರಾತ್ಯಕ್ಷತೆ ಮೂಲಕ ಬಯಲು ಮಲದಿಂದ ಹರಡುತ್ತಿರುವ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪ್ರಾಂಶುಪಾಲ ಜ್ಞಾನಪ್ರಕಾಶ್‌, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಪದ್ಮಮ್ಮ, ರೋಟರಿ ಸಂಸ್ಥೆ ಅಧ್ಯಕ್ಷ ಅನಂತರಾಜೇಅರಸ್‌, ಭಗೀರಥ ಸಂಸ್ಥೆ ಸಂಚಾಲಕ ಜಗದೀಶ್‌,  ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗೋವಿಂದ ರಾಜಗುಪ್ತ, ಸಹ ಪ್ರಾಧ್ಯಾಪಕರಾದ ಬಿ.ಎಂ.ನಾಗರಾಜ್‌, ದೀಪುಕುಮಾರ್‌ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next