Advertisement

Elon Musk: ಮಸ್ಕ್ ವಿರುದ್ಧ 2,200 ಮಂದಿ ಕೇಸು

09:22 PM Aug 30, 2023 | Team Udayavani |

ವಾಷಿಂಗ್ಟನ್‌: ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್ ಹಾಗೂ ಅವರ ಒಡೆತನದ ಎಕ್ಸ್‌ (ಟ್ವಿಟರ್‌) ಸಂಸ್ಥೆಯ ಮೇಲೆ ಟ್ವಿಟರ್‌ನ 2,000 ಮಂದಿ ಮಾಜಿ ಉದ್ಯೋಗಿಗಳು ಒಟ್ಟಾಗಿ ಕೇಸು ದಾಖಲಿಸಿದ್ದಾರೆ. ಸಾಂಸ್ಥಿಕ ಪುನರ್‌ ರಚನೆಯ ಕಾರಣ ನೀಡಿ, ಮಸ್ಕ್ ಸಾವಿರಾರು ಉದ್ಯೋಗಿಗಳನ್ನು ಟ್ವಿಟರ್‌ನಿಂದ ವಜಾಗೊಳಿಸಿದ್ದರು. ಈ ವೇಳೆ ಅವರಿಗೆ ಅಗತ್ಯ ಪರಿಹಾರ ನೀಡುವ ವಾಗ್ಧಾನವನ್ನೂ ಸಂಸ್ಥೆ ನೀಡಿತ್ತು. ಆದರೀಗ ಯಾವುದೇ ಪರಿಹಾರವನ್ನೂ ನೀಡದೆ, ಪರಿಹಾರ ಪ್ರಕ್ರಿಯೆಗೆ ಅಗತ್ಯವಾದ ಹಣವನ್ನೂ ಬಿಡುಗಡೆಗೊಳಿಸದೇ, ಸತಾಯಿಸುವ ಮೂಲಕ ಮಾಜಿ ಉದ್ಯೋಗಿಗಳಿಗೆ ಟ್ವಿಟರ್‌ ದ್ರೋಹವೆಸಗುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಮಾತುಕತೆ ಮಧ್ಯಸ್ಥಿಕೆ ಮೂಲಕ ಪರಿಹಾರ ಕ್ರಮದಿಂದ ಹೊರಬಂದು, ಸ್ಯಾನ್‌ಫ್ಯಾನ್ಸಿಸ್ಕೋ ಫೆಡರಲ್‌ ಕೋರ್ಟ್‌ನಲ್ಲಿ ದಾವೆ ಹೂಡಿದ್ದೇವೆ ಎಂದು ದಾವೆದಾರರ ಪೈಕಿ ಒಬ್ಬರಾಗಿರುವ, ಟ್ವಿಟರ್‌ನ ಸಿಯಾಟಲ್‌ ಕಚೇರಿಯ ಮಾಜಿ ಉದ್ಯೋಗಿ, ನೆಟ್ವರ್ಕ್‌ ಎಂಜಿನಿಯರ್‌ ಕ್ರಿಸ್‌ವುಡ್‌ ಮಾಹಿತಿ ನೀಡಿದ್ದಾರೆ.

ಮಧ್ಯಸ್ಥಿಕೆ ವಿಫ‌ಲ: ಮಾಜಿ ಉದ್ಯೋಗಿಗಳ ಕುಂದು ಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಟ್ವಿಟರ್‌ ಜೆಎಎಂಸ್‌ ಎಂಬ ಸಂಸ್ಥೆಯನ್ನು ಮಧ್ಯಸ್ಥಿಕೆಗೆ ನೇಮಿಸಿತ್ತು. ಈ ಸಂಸ್ಥೆಯು ಟೂ ಪಾರ್ಟಿ ಕೇಸ್‌ಗಾಗಿ 1.65 ಲಕ್ಷ ರೂ. ಹಾಗೂ 33,120 ರೂ.ಗಳನ್ನು ಉದ್ಯೋಗ ಸಂಬಂಧಿ ವಿವಾದಗಳ ವಿಚಾರಣೆ ಹಾಗೂ ಎಲ್ಲಾ ಉದ್ಯೋಗಿಗಳ ಸಂಪೂರ್ಣ ಕೇಸು ವಿಚಾರಣೆಗೆಂದು 2,200 ಡಾಲರ್‌ಗಳ ಶುಲ್ಕ ವಿಧಿಸಿದ್ದರು. ಈ ಶುಲ್ಕವನ್ನೂ ಟ್ವಿಟರ್‌ ಪಾವತಿಸದ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆ ಸಂಸ್ಥೆ ಕೂಡ ಹಿಂದೆ ಸರಿದಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next