Advertisement

ಕೋವಿಡ್ ರೂಪಾಂತರ ಭೀತಿ: ಇಂಗ್ಲೆಂಡ್ ನಿಂದ ಬಂದ 22 ಜನರಿಗೆ ಸೋಂಕು ದೃಢ

09:23 AM Dec 24, 2020 | keerthan |

ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ಇಂಗ್ಲೆಂಡ್ ನಿಂದ ಬಂದಿರುವ ಜನರಲ್ಲಿ ಕನಿಷ್ಠ 22 ಮಂದಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ ಎಂದು ವರದಿಯಾಗಿದೆ. ಇಂಗ್ಲೆಂಡ್ ನಲ್ಲಿ ರೂಪಾಂತರಿತ ಕೋವಿಡ್ ವೈರಸ್ ಪತ್ತೆಯಾಗಿರುವ ಕಾರಣ ಆ ದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ.

Advertisement

ಯು.ಕೆ ನಿಂದ ದಿಲ್ಲಿಗೆ ಆಗಮಿಸಿರುವ 11 ಮಂದಿ ಸೋಂಕು ಕಾಣಿಸಿಕೊಂಡಿದ್ದು, ಅಮೃತಸರಕ್ಕೆ ಬಂದಿಳಿದ ಎಂಟು ಮಂದಿಗೆ, ಕೋಲ್ಕತ್ತಾದಲ್ಲಿ ಎರಡು ಮತ್ತು ಚೆನ್ನೈ ನಲ್ಲಿ ಒಂದು ಸೋಂಕು ಪ್ರಕರಣ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಆದರೆ ರೂಪಾಂತರಿತ ಕೋವಿಡ್ ಸೋಂಕು ಪ್ರಕರಣದ ಬಗ್ಗೆ ದೇಶದಲ್ಲಿ ಇದುವರಗೆ ಯಾವುದೇ ಪ್ರಕರಣಗಳಲ್ಲಿ ದೃಢವಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಕೋವಿಡ್ ಪರಿಹಾರ ಪ್ಯಾಕೇಜ್‌ ಮಸೂದೆಗೆ ಸಹಿಹಾಕದಿರಲು ಟ್ರಂಪ್ ನಿರ್ಧಾರ‌ 

ಕೋವಿಡ್ ಪಾಸಿಟಿವ್ ಕಂಡುಬಂದವರ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಂತಹ ವಿಶೇಷ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಅಧಿಕಾರಿಗಳು ಕಳೆದ ನಾಲ್ಕು ವಾರಗಳಲ್ಲಿ ಯುಕೆ ಯಿಂದ ಬಂದ ಪ್ರತಿ ಪ್ರಯಾಣಿಕರನ್ನು ಪತ್ತೆಹಚ್ಚುತ್ತಿದ್ದಾರೆ. ಕಳೆದ ಎರಡು ವಾರಗಳಲ್ಲಿ ಬಂದವರಿಗೆ ಕಟ್ಟುನಿಟ್ಟಾದ ಸ್ವಯಂ-ಮೇಲ್ವಿಚಾರಣೆ ನಡೆಸಬೇಕೆಂದು ಸೂಚನೆ ನೀಡುತ್ತಿದ್ದಾರೆ.

ಭಾರತವು ಇಂಗ್ಲೆಂಡ್ ನಿಂದ ಬರುವ ಎಲ್ಲಾ ವಿಮಾನಗಳನ್ನು ಡಿಸೆಂಬರ್ 31 ರವರೆಗೆ ಸ್ಥಗಿತಗೊಳಿಸಿದೆ. ಎರಡನೇ ಅಲೆ ಭೀತಿಯ ಕಾರಣದಿಂದ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next