Advertisement

ತಿ.ನರಸೀಪುರ ಪುರಸಭೆಗೆ 22 ನಾಮಪತ್ರ ಸಲ್ಲಿಕೆ

12:22 PM Aug 18, 2018 | Team Udayavani |

ತಿ.ನರಸೀಪುರ: ಪುರಸಭೆ ಚುನಾವಣೆ ಕಾವೇರುತ್ತಿದ್ದು, ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಗುರುವಾರ 22 ಮಂದಿ ವಿವಿಧ ವಾರ್ಡ್‌ಗಳಿಗೆ ಸ್ಪರ್ಧಿಸಲು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

Advertisement

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ 2ನೇ ವಾರ್ಡ್‌ಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪುಟ್ಟು, ಎಸ್ಸಿ ಮಹಿಳೆಗೆ ಮೀಸಲಾಗಿರುವ ಮೂರನೇ ವಾರ್ಡ್‌ಗೆ ಶಿಲ್ಪಾ, ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಲ್ಕನೇ ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ಎನ್‌.ಮಂಜುನಾಥ್‌, ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್‌.ಜಯಕುಮಾರ್‌, ಸಾಮಾನ್ಯ ಕ್ಷೇತ್ರ ಐದನೇ ವಾರ್ಡ್‌ಗೆ ಪಕ್ಷೇತರರಾಗಿ ಎಸ್‌.ಪುರುಷೋತ್ತಮ, ಸತ್ಯನಾರಾಯಣ, ರಾಚೇಗೌಡ, ಸಿದ್ದರಾಜು ಉಮೇದುವಾರಿಕೆ ಸಲ್ಲಿಸಿದರು.

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ಆರನೇ ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ಗಿರಿಜಮ್ಮ, ಸಾಮಾನ್ಯ ಕ್ಷೇತ್ರ ಏಳನೇ ವಾರ್ಡ್‌ಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪಿ.ಪುಟ್ಟರಾಜು, ಬಿಜೆಪಿ ಅಭ್ಯರ್ಥಿಯಾಗಿ ಆರ್‌.ಮಣಿಕಂಠರಾಜ್‌, ಪಕ್ಷೇತರರಾಗಿ ಎಸ್‌.ಲಕ್ಷ್ಮೀ, ಅಗಸ್ತೇಗೌಡ, ಎಸ್‌.ವಿನೋದ, ತುಂಬಲ ಪ್ರಕಾಶ್‌, ನಾಗಮ್ಮ, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಎಂಟನೇ ವಾರ್ಡ್‌ಗೆ ಪಕ್ಷೇತರರಾಗಿ ಎಚ್‌.ಗೀತಾ,

ವಾಣಿ, ಸಾಮಾನ್ಯವಾಗಿರುವ ಒಂಬತ್ತನೇ ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೀರಭದ್ರಪ್ಪ, ಪಕ್ಷೇತರರಾಗಿ ಜಯಶಂಕರ್‌, ಡಿ.ರಾಮಕೃಷ್ಣ, ಸಾಮಾನ್ಯ ಮಹಿಳೆ ಮೀಸಲು ವಾರ್ಡ್‌ ಹನ್ನೆರಡರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೀತಾ ಹಾಗೂ ಪರಿಶಿಷ್ಟ ಜಾತಿ ಮೀಸಲು ವಾರ್ಡ್‌ 14ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಎಸ್‌.ಮಹದೇವಸ್ವಾಮಿ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್‌ ಕೆ.ರಾಜು, ಜಿಪಂ ಕುಡಿಯುವ ನೀರು ಉಪ ಭಾಗದ ಎಇಇ ಏಜಾಜ್‌ ಅಹಮದ್‌ ಸಿದ್ಧಿಖೀ, ಸಹಾಯಕ ಚುನಾವಣಾಧಿಕಾರಿಗಳಾಗಿ ಆರ್‌.ಶಿವಣ್ಣ, ಚಂದ್ರಶೇಖರ್‌ ಹಾಗೂ ಶಿರಸ್ತೇದಾರ್‌ ಪ್ರಭುರಾಜ್‌ ಕರ್ತವ್ಯ ನಿರ್ವಹಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next