Advertisement

22 ಕೋಟಿ ರೂ. ವೆಚದ ಅಭಿವೃದ್ದಿ ಕಾಮಗಾರಿಗೆ ಚಾಲನೆ

03:33 PM Oct 28, 2021 | Team Udayavani |

ಔರಾದ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಬುಧವಾರ ತಾಲೂಕಿನ ಹಂಗರಗಾ, ವನಮಾರಪಳ್ಳಿ, ಇಟಗ್ಯಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸುಮಾರು 22 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

Advertisement

ಹಂಗರಗಾದಿಂದ ಮಹಾರಾಷ್ಟ್ರ ಬಾರ್ಡರ್‌ ರಸ್ತೆವರೆಗೆ 2.45 ಕೋಟಿ ರಸ್ತೆ ಕಾಮಗಾರಿ, ವನಮಾರಪಳ್ಳಿಯಲ್ಲಿ 15 ಲಕ್ಷದ ಅಂಗನವಾಡಿ ಕಟ್ಟಡ, ಚಿಂತಾಕಿಯಲ್ಲಿ 15 ಲಕ್ಷದ ಹೈಮಾಸ್ಟ್‌ ದೀಪಗಳು, ಚಿಂತಾಕಿಯಿಂದ ಬೆಲ್ದಾಳ್‌ವರೆಗೆ 1 ಕೋಟಿ ರಸ್ತೆ ಕಾಮಗಾರಿ, ವಡಗಾಂವ್‌ನಿಂದ ಡಾಕು ತಾಂಡಾವರೆಗೆ 1.5 ಕೋಟಿ ರಸ್ತೆ ಕಾಮಗಾರಿ, ಜಂಬಗಿಯಲ್ಲಿ 2 ಕೋಟಿ ರಸ್ತೆ ಕಾಮಗಾರಿ, ಖಾನಾಪುರನಲ್ಲಿ 30 ಲಕ್ಷದ ಶಾಲೆ ಕಟ್ಟಡ, ಕೌಠಾ (ಬಿ)ನಲ್ಲಿ 15 ಲಕ್ಷದ ಹೈಮಾಸ್ಟ್‌ ದೀಪ, ಬಾಬಳಿಯಲ್ಲಿ 21 ಲಕ್ಷದ ಶಾಲೆ ಕಟ್ಟಡ ಕಾಮಗಾರಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.

ಚಟ್ನಾಳ ಗ್ರಾಮದಲ್ಲಿ 22 ಲಕ್ಷ ಮೊತ್ತದ ಶಾಲಾ ಕಟ್ಟಡ, ಸಂತಪುರದಲ್ಲಿ 15 ಲಕ್ಷ ಮೊತ್ತದ ಹೈಮಾಸ್ಟ್‌ ದೀಪಗಳು, 2 ಕೋಟಿ ಮೊತ್ತದ ಶಾಲಾ ಕಟ್ಟಡ ಹಾಗೂ 3.5 ಕೋಟಿ ಮೊತ್ತದ ಆಸ್ಪತ್ರೆ ಕಟ್ಟಡ, ಕೊಳ್ಳೂರನಲ್ಲಿ 30 ಲಕ್ಷದ ಶಾಲಾ ಕಟ್ಟಡ, ಎಕಲಾರದಲ್ಲಿ 24 ಲಕ್ಷದ ಶಾಲಾ ಕಟ್ಟಡ, ವಡಗಾಂವ್‌ನಲ್ಲಿ 15 ಲಕ್ಷ ಮೊತ್ತದ ಹೈಮಾಸ್ಟ್‌ ದೀಪ, ವಡಗಾಂವನಿಂದ ಕಂದಗೂಳವರೆಗೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ಬಗ್ಗೆ ದೂರುಗಳು ಬಾರದಂತೆ ಎಚ್ಚರ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಇದನ್ನೂ ಓದಿ: ಚೀನಾ ಗಡಿ ಬಂದ್: ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು, ಕಡಿಮೆ ಊಟ ಮಾಡಿ ಎಂದ ಕಿಮ್!

Advertisement

ಈ ವೇಳೆ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪಾ ಕಂಟೆ, ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ವಸಂತ ವಕೀಲ, ಸಚಿನ ರಾಠೊಡ, ಶ್ರೀನಿವಾಸ ಖೂಬಾ, ಸುರೇಶ ಭೋಸ್ಲೆ, ರಾಮ ನರೋಟೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಶೇಷರಾವ್‌ ಕೋಳಿ, ಪ್ರಕಾಶ ಮೇತ್ರೆ, ಹಣಮಂತ ಸುರನಾರ, ರಮೇಶ ಬಿರಾದಾರ, ಖಂಡೋಬಾ ಕಂಗಟೆ, ವೀರೇಂದ್ರ ರಾಜಾಪೂರೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next