ಇಸ್ಲಮಾಬಾದ್: ಪಾಕಿಸ್ಥಾನದ ಮಾಜಿ ನಾಯಕ ವಾಸಿಂ ಆಕ್ರಮ್ ಅವರು ಪಾಕಿಸ್ಥಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ನನ್ನು ಹಾಡಿ ಹೊಗಳಿದ್ದಾರೆ. 21ನೇ ಶತಮಾನವು ಈ ಬಾಬರ್ ಅಜಮ್ ಗೆ ಸೇರುತ್ತದೆ ಎಂದು ವಾಸಿಂ ಅಕ್ರಮ್ ಹೇಳಿದ್ದಾರೆ.
ಸ್ಪೋರ್ಟ್ಸ್ 360 ಜೊತೆ ಮಾತನಾಡಿದ ವಾಸಿಂ ಅಕ್ರಮ್, “ಪಾಕಿಸ್ತಾನದ ಬ್ಯಾಟಿಂಗ್ ಬಗ್ಗೆ ಮಾತನಾಡುವುದಾದರೆ ಜಹೀರ್ ಅಬ್ಬಾಸ್, ಜಾವೇದ್ ಮಿಯಾಂದಾದ್, ಸಲೀಮ್ ಮಲಿಕ್, ಇಂಜಮಾಮ್-ಉಲ್-ಹಕ್, ಯೂನಿಸ್ ಖಾನ್, ಮೊಹಮ್ಮದ್ ಯೂಸುಫ್ ಮತ್ತು ನಂತರ ಬರುವುದು ಈಗ ಅದು ಬಾಬರ್ ಆಜಮ್. 21 ನೇ ಶತಕ ಬಾಬರ್ ಆಜಮ್ ಅವರದ್ದು” ಎಂದಿದ್ದಾರೆ.
2017 ರಲ್ಲಿ ಕರಾಚಿ ಕಿಂಗ್ಸ್‌ನಲ್ಲಿ ಮಾರ್ಗದರ್ಶಕರಾಗಿದ್ದ ಸಮಯದಲ್ಲಿ ಬಾಬರ್ ಅವರೊಂದಿಗೆ ಕೆಲಸ ಮಾಡಿದ್ದನ್ನು ಅಕ್ರಂ ನೆನಪಿಸಿಕೊಂಡರು.
ಇದನ್ನೂ ಓದಿ:ನಾಳೆಯಿಂದ ಕಬಡ್ಡಿ ಕಲರವ: ಹೇಗಿದೆ ನೋಡಿ ನಮ್ಮ ಬೆಂಗಳೂರು ಬುಲ್ಸ್ ತಂಡ
“2010 ರಲ್ಲಿ ಅವರು ನಾಯಕರಾಗಿದ್ದಾಗಿನಿಂದ ನಾನು ಅವರನ್ನು ನೋಡಿದ್ದೇನೆ. ಅವರು ಸರಿಯಾದ ಶ್ರೇಣಿಯ ಮೂಲಕ ಬಂದವರು, ಕಳೆದ ಮೂರು ವರ್ಷಗಳಿಂದ ನಾನು ಕರಾಚಿ ಕಿಂಗ್ಸ್‌ನಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ” ಎಂದು ಅವರು ಹೇಳಿದರು.
ಬಾಬರ್ ಅಜಮ್ ಅವರ ಕೆಲಸದ ನೀತಿ ಮತ್ತು ಬ್ಯಾಟ್‌ನೊಂದಿಗೆ ಸ್ಥಿರತೆಯನ್ನು ವಾಸಿಂ ಶ್ಲಾಘಿಸಿದರು, ಈ ಎಲ್ಲಾ ಗುಣಗಳು ಉತ್ತಮ ನಾಯಕನ ಸಂಕೇತಗಳಾಗಿವೆ ಎಂದು ಹೇಳಿದರು.