Advertisement

ಕರ್ನಾಟಕ ಕೋ  ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 21ನೇ ವಾರ್ಷಿಕ ಮಹಾಸಭೆ

05:13 PM Sep 04, 2018 | |

ಮುಂಬಯಿ: ಇಂದಿನ  ಬದಲಾವಣೆಯ ಕಾಲಘಟ್ಟದಲ್ಲಿ ಮನುಷ್ಯನಿಗೆ ನೀಡಿದ ಸೌಕರ್ಯಗಳಿಂದ ಸಂತೋಷ ಪಡುವಂತಿಲ್ಲ. ಮಾರುಕಟ್ಟೆಯ ಸ್ಪರ್ಧೆಗೆ ಅನುಗುಣವಾಗಿ ಸವಲತ್ತು ನೀಡಿದರೆ, ಸಣ್ಣ ಹಣಕಾಸು ಸಂಸ್ಥೆಗಳು ಖಾಸಗಿ ಹಾಗೂ ಸರಕಾರಿ ಸಾಮ್ಯದ ಬ್ಯಾಂಕ್‌ಗಳಿಗೆ ಸ್ಪರ್ಧೆ ನೀಡಿ ಗೆಲ್ಲಬಹುದು ಎಂಬುವುದಕ್ಕೆ ವಸಾಯಿ ಪರಿಸರದ ಈ ಕರ್ನಾಟಕ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಸಾಕ್ಷಿಯಾಗಿದೆ. ಅಪನಗದೀಕರಣದಂತಹ ಸಮಯದಲ್ಲೂ ನಾವು ದಿಟ್ಟ ನಿಲುವನ್ನು ಎದುರಿಸಿ ಯಾವುದೇ ಅಡೆತಡೆಗಳಿಲ್ಲದೆ ನಮ್ಮ ವ್ಯವಹಾರಕ್ಕೆ ಧಕ್ಕೆ ಬಾರದಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯನ್ನು ಹೊಂದಿದ್ದೇವೆ. ಠೇವಣಿ, ಸರಳ ಸಾಲ ಸೌಲಭ್ಯಗಳ ಮೂಲಕ ನಾವು ಜನರನ್ನು ಆಕರ್ಷಿಸುವಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅವರ ವಿಶ್ವಾಸಕ್ಕೆ ಪಾತ್ರರಾಗಿ ನಮ್ಮ ಕ್ಷೇತ್ರವನ್ನು ಇತರ ಉಪನಗರಕ್ಕೆ ವಿಸ್ತರಿಸಿ ವಿಶಾಲ ಹಣಕಾಸು ಸಂಸ್ಥೆಯನ್ನಾಗಿ ಪ್ರಸಿದ್ಧಿ ಪಡೆಯಬೇಕು ಎಂದು ಕರ್ನಾಟಕ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ ನುಡಿದರು.

Advertisement

ಸೆ. 1ರಂದು ವಸಾಯಿ ಪಶ್ಚಿಮದ ಬಬೊಲಾದ ಪಾಪಡಿ ರೋಡ್‌ನ‌ ಡಿ. ಸಿ. ಕ್ಲಬ್‌ ಹಾಲ್‌ನಲ್ಲಿ ನಡೆದ ಕರ್ನಾಟಕ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 21 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಹಕರನ್ನು ಸಂತೃಪ್ತಿಪಡಿಸುವಂತಹ ಯೋಜನಾತ್ಮಕ ಬದಲಾವಣೆಗಳು ಕ್ರೆಡಿಟ್‌ ಸೊಸೈಟಿಯ ದಿಕ್ಕನ್ನು ಬದಲಾಯಿಸುವುದರ ಜೊತೆಗೆ ನಮ್ಮ ಸಂಪನ್ಮೂಲಗಳು ಇತರರಿಗೆ ದಾರಿದೀಪವಾದರೆ ನಮ್ಮ ಶ್ರಮ ಸಾರ್ಥಕ. ಖಾಸಗಿ ಹಣಕಾಸು ಸಂಸ್ಥೆಗಳು ಇಂದು ಮನೆಬಾಗಿಲಿಗೆ ಸಾಲ ಒದಗಿಸುವಂತಹ ದಿನಗಳಲ್ಲಿ ನಮ್ಮ ಸೊಸೈಟಿಯು ಸ್ಪರ್ಧಾತ್ಮಕ ಸೇವೆ ಸಲ್ಲಿಸುವ ತರಾತುರಿಯಲ್ಲಿರಬೇಕು. ಗ್ರಾಹಕರಿಗೆ ತಮ್ಮ ಠೇವಣಿ ಬಂಡವಾಳಕ್ಕೆ ಕ್ರೆಡಿಟ್‌ ಸೊಸೈಟಿಗಳು ವಾಗ್ಧಾನ ಬದ್ಧರಾಗಿಬೇಕು ಎಂದರು.

ಗೌರವ ಕೋಶಾಧಿಕಾರಿ ಮಂಜಳಾ ಆನಂದ ಶೆಟ್ಟಿ ಪ್ರಾರ್ಥನೆಗೈದರು. ಸಂಸ್ಥೆಯ ನಿರ್ದೇಶಕರು ಹಾಗೂ ಹಿರಿಯ ಸಲಹೆಗಾರ ಮುಕುಂದ ಎಸ್‌. ಶೆಟ್ಟಿ ಸ್ವಾಗತಿಸಿ ಮಾತನಾಡಿ, ವಸಾಯಿ ಪರಿಸರದಲ್ಲಿ ಇದೀಗ  ಯೌವನಾವಸ್ಥೆಗೆ  ತಲುಪಿದ ಈ ಕ್ರೆಡಿಟ್‌ ಸೊಸೈಟಿಯ ಬದ್ಧತೆ, ಭದ್ರತೆಯೊಂದಿಗೆ ಈ ಪರಿಸರದಲ್ಲಿ ಶ್ರೇಷ್ಠ ಹಣಕಾಸು ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಗೌರವ ಕೋಶಾಧಿಕಾರಿ ಒ. ಪಿ. ಪೂಜಾರಿ ಗತ ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ದೇಶಕ ಕರ್ನೂರು ಶಂಕರ್‌ ಆಳ್ವ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಮಂಡಿಸಿದರು. ಆರ್ಥಿಕ ವರ್ಷದಲ್ಲಿ ಠೇವಣಿ 706.01 ಲಕ್ಷ ರೂ. ಹೂಡಿಕೆಯಾಗಿದ್ದು, 301.69 ಲಕ್ಷ ರೂ. ಸಾಲ ನೀಡಿ ಹಲವಾರು ಸ್ವ ಉದ್ಯೋಗ ಯೋಜನೆಗಳಿಗೆ ಸಹಕಾರಿಯಾಗಿದೆ. ಸೊಸೈಟಿಯ ಲಾಭಾಂಶವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶೇರುದಾರರಿಗೆ ಶೇ. 14 ರಷ್ಟು ಡೆವಿಡೆಂಡ್‌ ಘೋಷಿಸಿದೆ. 2019 ರಲ್ಲಿ ಸೊಸೈಟಿಯ ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದು, ಸಾಲ, ಲಾಭಾಂಶ, ಠೇವಣಿಯನ್ನು ದ್ವಿಗುಣಗೊಳಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿ ಎಲ್ಲರ ಸಹಕಾರ ಬಯಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಸಾಯಿ ಕರ್ನಾಟಕ ಸಂಘದ ಗೌರವಾಧ್ಯಕ್ಷ ವಿಶ್ವನಾಥ್‌ ಪಿ. ಶೆಟ್ಟಿ ಅವರು ಸೊಸೈಟಿಯ ಕಾರ್ಯವೈಖರಿಯನ್ನು ಶ್ಲಾಘಿಸಿ, ಸಂಸ್ಥೆಯಲ್ಲಿ ಹಣಕಾಸಿನ ಸಮಾನತೆಯನ್ನು ಕಾಪಾಡಿಕೊಳ್ಳುವ ಮೂಲಕ ನಾವು ಗ್ರಾಹಕರನ್ನು ಆಕರ್ಷಿಸುವಂತಹ ಯೋಜನೆಗಳನ್ನು ಕೈಗೊಳ್ಳಬೇಕು. ಗ್ರಾಹಕರು ಇಡುವ ಠೇವಣಿ ಹಾಗೂ ನಾವು ನೀಡುವ ಸಾಲ ಎರಡು ಹೊಂದಾಣಿಕೆಯಾಗಿರಬೇಕು. ಇದರಿಂದ ನಮ್ಮ ಹಣಕಾಸು ಸಂಸ್ಥೆಗೆ ಹೆಚ್ಚಿನ ಪ್ರಯೋಜನವಾಗುವುದಲ್ಲದೆ, ಬಂಡವಾಳವನ್ನು ಸಾಧ್ಯವಾದಷ್ಟು ಹೆಚ್ಚಿಸುವಲ್ಲಿ ನಮ್ಮ ಶ್ರಮ ಮುಂದಿರಬೇಕು ಎಂದರು.

Advertisement

ಥಾಣೆ ಜಿಲ್ಲಾ ಸಹಕಾರಿ ಅಭಿವೃದ್ಧಿ ಅಧಿಕಾರಿ ಪಿ. ಕೆ. ಪನಸ್ಕರ್‌ ಅವರು ಮಾತನಾಡಿ, ಎಲ್ಲಾ ರೀತಿಯಲ್ಲೂ ಜನರನ್ನು ಲೂಟಿಗೈಯುತ್ತಿರುವ ಸಾರ್ವಜನಿಕ ರಂಗದ ಹಣಕಾಸು ಸಂಸ್ಥೆಗೆ ಇಂತಹ ಕ್ರೆಡಿಟ್‌ ಸೊಸೈಟಿಗಳು ಸ್ಪರ್ಧೆ ನೀಡುವ ಮೂಲಕ ಜನಸಾಮಾನ್ಯರ ಬದುಕಿಗೆ ಹೊಸ ಚಿಂತನೆಯನ್ನು ರೂಪಿಸಲು ಸಹಕಾರಿಯಾಗಬೇಕು. ಕರ್ನಾಟಕ ಹಾಗೂ ಮಹಾರಾಷ್ಟ್ರ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ದೇಶದಲ್ಲಿ ಈ ಎರಡು ರಾಜ್ಯಗಳು ಪ್ರಥಮ ಸ್ಥಾನದಲ್ಲಿದೆ ಎಂದರು.

ಶೇರುದಾರರು ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಗೌರವ ಕೋಶಾಧಿಕಾರಿ ಮಂಜುಳಾ ಶೆಟ್ಟಿ ಆಯವ್ಯಯ ಪಟ್ಟಿ ಮಂಡಿಸಿದರು. ವಿಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಪಾಂಡು ಎಲ್‌. ಶೆಟ್ಟಿ, ರಮೇಶ್‌ ಎಸ್‌. ಪ್ರಭು, ಶಶಿಕಾಂತ್‌ ಎಸ್‌. ಶೆಟ್ಟಿ, ಉದ್ದವ್‌ ಕಾಂಬ್ಳೆ, ಜಯಂತಿ ಎಸ್‌. ಕೋಟ್ಯಾನ್‌ ಮತ್ತಿತರರು 

ಉಪಸ್ಥಿತರಿದ್ದರು. ಸಿಇಒ ರಮೇಶ್‌ ಸಿರೋಲೆ, ಪ್ರಬಂಧಕ ರವಿಕಾಂತ್‌ ನಾಯಕ್‌, ಕಚೇರಿ ಸಹಾಯಕಿ ಸೋನಿ ವೈ. ಶೆಟ್ಟಿ ಹಾಗೂ ದೈನಂದಿನ ಠೇವಣಿ ಏಜೆಂಟರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಿರ್ದೇಶಕ ದೇವೇಂದ್ರ ಬುನ್ನನ್‌ ವಂದಿಸಿದರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next