ಬುಕಾರೆಸ್ಟ್ : ಯುದ್ಧ ದಿಂದ ನಲುಗಿ ಹೋಗಿರುವ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣಾ ಕಾರ್ಯವನ್ನು ಸರಕಾರ ಆರಂಭಿಸಿದ್ದು, ಶನಿವಾರ 219 ಮಂದಿ ಭಾರತೀಯರನ್ನು ಉಕ್ರೇನ್ ನ ನೆರೆಯ ರಾಷ್ಟ್ರ ರೊಮೇನಿಯಾ ಮೂಲಕ ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಮುಂಬಯಿಯತ್ತ ಕರೆ ತರಲಾಗುತ್ತಿದೆ. ಶನಿವಾರ ರಾತ್ರಿ ೮ ಗಂಟೆಯ ವೇಳೆಗೆ ವಿಮಾನ ಮುಂಬಯಿಗೆ ಬಂದಿಳಿಯಲಿದೆ.
ವಿಮಾನ ನಿಲ್ದಾಣದಲ್ಲಿ ಭವಿಷ್ಯದ ಕನಸು ಕಟ್ಟಿ ಹೋಗಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಕಣ್ಣೀರಿನಲ್ಲೇ , ಭವಿಷ್ಯದ ಚಿಂತನೆಯಲ್ಲಿ ವಿಮಾನವನ್ನೇರಿದ್ದು ಮನಕಲಕುವಂತಿತ್ತು.
ರೊಮೇನಿಯಾದ ಭಾರತೀಯ ರಾಯಭಾರಿ ರಾಹುಲ್ ಶ್ರೀವಾತ್ಸವ ವಿಮಾನದಲ್ಲಿದ್ದವರನ್ನುದ್ದೇಶಿಸಿ ಮಾತನಾಡಿ, ಭಾರತ ಸರಕಾರ ಪ್ರಜೆಗಳನ್ನು ರಕ್ಷಿಸಲು ಹಗಲಿರುಳು ಕೆಲಸ ಮಾಡುತ್ತಿದೆ. ಕೊನೆಯ ವ್ಯಕ್ತಿಯನ್ನು ರಕ್ಷಿಸುವ ವರೆಗೂ ಸರಕಾರ ಕೆಲಸ ನಿಲ್ಲಿಸುವುದಿಲ್ಲ ಎಂದರು.
ಇದನ್ನೂ ಓದಿ :ಉಕ್ರೇನ್ ವಿಚಾರದಲ್ಲಿ ಭಾರತದ ವಿದೇಶಾಂಗ ನೀತಿ ವಿಫಲ : ಕಾಂಗ್ರೆಸ್ ಟೀಕೆ
ನನ್ನ ಸಹೋದರ, ಸಹೋದರಿಯರೇ, “ಜೀವನದಲ್ಲಿ ವಿಷಯಗಳು ಕಷ್ಟಕರವಾದಾಗ ಫೆಬ್ರವರಿ ೨೬, ಈ ದಿನವನ್ನು ನೆನಪಿಡಿ.” ಎಂಬ ಮನಕಲಕುವ ಈ ಮಾತನ್ನು ಹೇಳಿದರು.