Advertisement

ಎಸ್ಸೆಸ್ಸೆಲ್ಸಿ ಕೊನೆ ಪರೀಕ್ಷೆಗೆ 2,149 ವಿದ್ಯಾರ್ಥಿಗಳು ಗೈರು

09:14 AM Jul 04, 2020 | Suhan S |

ವಿಜಯಪುರ: ಜಿಲ್ಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ದ್ವಿತೀಯ ವಿಷಯ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದ 35,119 ಅಭ್ಯರ್ಥಿಗಳಲ್ಲಿ 32,970 ಪರೀಕ್ಷಾರ್ಥಿಗಳು ಹಾಜರಾಗಿದ್ದರು. 2149 ಪರೀಕ್ಷಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಸನ್ನಕುಮಾರ, ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ 4947 ಅಭ್ಯರ್ಥಿಗಳು 4743 ಪರೀಕ್ಷಾರ್ಥಿಗಳು ಹಾಜರಾಗಿದ್ದು, 204 ಪರೀಕ್ಷಾರ್ಥಿಗಳು ಗೈರಾಗಿದ್ದಾರೆ. ವಿಜಯಪುರ ನಗರದಲ್ಲಿ 7180 ಪರೀಕ್ಷಾರ್ಥಿಗಳಲ್ಲಿ 6381 ಪರೀಕ್ಷಾರ್ಥಿಗಳು ಹಾಜರಾಗಿದ್ದು, 799 ಪರೀಕ್ಷಾರ್ಥಿಗಳು ಗೈರಾಗಿದ್ದಾರೆ. ವಿಜಯಪುರ ಗ್ರಾಮಿಣ ವಲಯದಲ್ಲಿ 5628 ಪರೀಕ್ಷಾರ್ಥಿಗಳಲ್ಲಿ 5389 ಪರೀಕ್ಷಾರ್ಥಿಗಳು ಹಾಜರಾಗಿದ್ದು, 239 ಪರೀಕ್ಷಾರ್ಥಿಗಳು ಗೈರಾಗಿದ್ದಾರೆ. ಚಡಚಣ ತಾಲೂಕಿನಲ್ಲಿ 2553 ಪರೀಕ್ಷಾರ್ಥಿಗಳಲ್ಲಿ 2392 ವಿದ್ಯಾರ್ಥಿಗಳ ಹಾಜರಾಗಿದ್ದು, 161 ಪರೀಕ್ಷಾರ್ಥಿಗಳು ಗೈರಾಗಿದ್ದಾರೆ. ಇಂಡಿ ತಾಲೂಕಿನಲ್ಲಿ 3754 ಪರೀಕ್ಷಾರ್ಥಿಗಳಲ್ಲಿ 3479 ಪರೀಕ್ಷಾರ್ಥಿಗಳು ಹಾಜರಾಗಿದ್ದು, 275 ಪರೀಕ್ಷಾರ್ಥಿಗಳು ಗೈರಾಗಿದ್ದಾರೆ. ಮುದ್ದೇಬಿಹಾಳ ತಾಲೂಕಲ್ಲಿ 5167 ಪರೀಕ್ಷಾರ್ಥಿಗಳಲ್ಲಿ 4953 ವಿದ್ಯಾರ್ಥಿಗಳು ಹಾಜರಾಗಿದ್ದು, 214 ಪರೀಕ್ಷಾರ್ಥಿಗಳು ಗೈರಾಗಿದ್ದಾರೆ. ಸಿಂದಗಿ ತಾಲೂಕಲ್ಲಿ 5890 ಪರೀಕ್ಷಾರ್ಥಿಗಳಲ್ಲಿ 5633 ಪರೀಕ್ಷಾರ್ಥಿಗಳು ಹಾಜರಾಗಿದ್ದು, 257 ಪರೀಕ್ಷಾರ್ಥಿಗಳು ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next