Advertisement

ಉಡುಪಿ ಜಿಲ್ಲೆಯಲ್ಲಿ 213 ಹೊಸ ಪ್ರಕರಣಗಳು ದೃಢ!

07:58 PM Sep 10, 2020 | sudhir |

ಉಡುಪಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹಿಚ್ಚಾಗುತಿದ್ದು ಇಂದು 213 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 4355ಕ್ಕೆ ಏರಿಕೆಯಾಗಿದೆ.

Advertisement

ಇಂದು 54 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 2428 ಮಂದಿ ಬಿಡುಗಡೆಗೊಂಡಿದ್ದಾರೆ. ಒಟ್ಟು 1898 ಸಕ್ರೀಯ ಪ್ರಕರಣಗಳು ಇದ್ದು ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಸೋಂಕಿಗೆ 29 ಮಂದಿ ಸಾವನ್ನಪ್ಪಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ದಿನಂಪ್ರತಿ ಏರಿಕೆ ಪ್ರಮಾಣದಲ್ಲಿ ಕಂಡುಬರುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ಗುಲ್ವಾಡಿ : ಮೂವರಿಗೆ ಪಾಸಿಟಿವ್‌
ಬಸ್ರೂರು: ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಶುಕ್ರವಾರ ಓರ್ವ ಪುರುಷ ಹಾಗೂ ಇಬ್ಬರು ಮಹಿಳೆಯರಿಗೆ ಕೊರೊನಾ ಪಾಸಿಟಿವ್‌ ವರದಿ ಬಂದಿದ್ದು, ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕುಂದಾಪುರ ತಾಲೂಕಿನಲ್ಲಿ 56 ಮಂದಿಗೆ ಕೋವಿಡ್ ಸೋಂಕು
ಕುಂದಾಪುರ: ಬೈಂದೂರು ತಾಲೂಕಿನಲ್ಲಿ 8 ಮಂದಿ ಹಾಗೂ ಕುಂದಾಪುರ ತಾಲೂಕಿನ 48 ಮಂದಿಗೆ ಸೇರಿದಂತೆ ಒಟ್ಟು 56 ಮಂದಿಗೆ ಶುಕ್ರವಾರ ಕೋವಿಡ್ ಪಾಸಿಟಿವ್‌ ಬಂದಿದೆ.

Advertisement

ಕುಂದಾಪುರ ತಾಲೂಕಿನ ಕುಂಭಾಸಿಯ 13, ಕೋಣಿಯ 7, ಬಳ್ಕೂರಿನ 6, ಆಲೂರು, ಬೀಜಾಡಿಯ ತಲಾ ಐವರು, ಪುರಸಭೆ ವ್ಯಾಪ್ತಿಯ ನಾಲ್ವರು, ಮೊಳಹಳ್ಳಿ, ತ್ರಾಸಿಯ ತಲಾ ಮೂವರು, ಆನಗಳ್ಳಿಯ ತಲಾ ಒಬ್ಬರಿಗೆ, ಬೈಂದೂರು ತಾಲೂಕಿನ ಹಡವು ಗ್ರಾಮದ ನಾಲ್ವರು, ಶಿರೂರು, ಕೆರ್ಗಾಲು, ನಾಡ ಹಾಗೂ ಕಂಬದಕೋಣೆಯ ತಲಾ ಒಬ್ಬರಿಗೆ ಕೋವಿಡ್ ಪಾಸಿಟಿವ್‌ ಇರುವುದು ದೃಢವಾಗಿದೆ.

ಗಂಗೊಳ್ಳಿ ಕಾವಲು ಪಡೆ ಠಾಣೆ ಸೀಲ್‌ಡೌನ್‌
ಗಂಗೊಳ್ಳಿಯಲ್ಲಿರುವ ಕರಾವಳಿ ಕಾವಲು ಪಡೆ ಪೊಲೀಸ್‌ ಠಾಣೆಯ ಇಬ್ಬರು ಸಿಬಂದಿಗೆ ಕೋವಿಡ್ ಪಾಸಿಟಿವ್‌ ಬಂದಿದ್ದು, ಇದರಿಂದ ಠಾಣೆಯನ್ನು ಆ.3 ವರೆಗೆ ಸೀಲ್‌ಡೌನ್‌ ಮಾಡಲಾಗಿದೆ. ಎಸ್‌ಐ ಸಹಿತ ಎಲ್ಲ ಸಿಬಂದಿಯನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next